ಕೊರೊನಾದಿಂದ ಗುಣಮುಖರಾದವರಲ್ಲಿ ಹೊಸ ಸಮಸ್ಯೆ ಶುರು

0
26

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರನ್ನು ಇದೀಗ ಪಿತ್ತಕೋಶ ಗ್ಯಾಂಗ್ರಿನ್ ಎಂಬ ಕಾಯಿಲೆ ಕಾಡುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಐವರು ರೋಗಿಗಳಲ್ಲಿ ಇದು ಪತ್ತೆಯಾಗಿದೆ. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಇಂತಹ ಪ್ರಕರಣಗಳ ಮೊದಲ ವರದಿ ಮಾಡಿದ್ದು, ಇದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಜೂನ್ ಮತ್ತು ಆಗಸ್ಟ್ ನಡುವೆ 5 ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಈ ಐವರಲ್ಲಿ ಇದೀಗ ಪಿತ್ತಕೋಶದ ಗ್ಯಾಂಗ್ರಿನ್ ಕಂಡುಬಂದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇದು ಸಾಮಾನ್ಯವಾಗಿ ಮಧುಮೇಹ, ಎಚ್‌ಐವಿ ಸೋಂಕು, ನಾಳೀಯ ರೋಗ, ದೀರ್ಘಕಾಲದ ಉಪವಾಸದಲ್ಲಿರುವವರು, ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಆಘಾತ, ಸುಟ್ಟಗಾಯಗಳು ಮತ್ತು ಸೆಪ್ಸಿಸ್‌ಗಳ ಇತಿಹಾಸ ಹೊಂದಿರುವ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಆರೋರಾ ಹೇಳಿದ್ದಾರೆ.

‘ಪಿತ್ತಕೋಶದ ಎಪಿಥೇಲಿಯಲ್ ಕೋಶಗಳು ಪಿತ್ತರಸ ನಾಳದ ಕೋಶಗಳಿಗೆ ಹೋಲುತ್ತವೆ. SARS-CoV-2 ಅಥವಾ ವೈರಸ್ ವಿರುದ್ಧ ದೇಹದ ಅನಿಯಂತ್ರಿತ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಇದು ಗುರಿಯಾಗಬಹುದು. ಪಿತ್ತಕೋಶದ ತೀವ್ರವಾದ ಉರಿಯೂತಕ್ಕೂ ಇದು ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದರು

LEAVE A REPLY

Please enter your comment!
Please enter your name here