ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಳೆಯಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತದ ಗೆಲುವನ್ನು ಅನುಮಾನಿಸಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ 5ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಸೋಲಿಸುವುದು ಕಷ್ಟ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಪಿಚ್ ಗಳಲ್ಲಿ ಸ್ವಿಂಗ್ ಬೌಲಿಂಗ್ ಹೆಚ್ಚಾಗಿ ಕೆಲಸ ಮಾಡುತ್ತದೆ ಫಾಸ್ಟ್ ಮತ್ತು ಸ್ಪಿನ್ ಬೌಲರ್ ಗಳು ಹೆಚ್ಚಿನ ವಿಕೆಟ್ ತೆಗೆಯುವುದು ಕಷ್ಟ ಎಂದು ಹೇಳಿರುವ ಯುವರಾಜ್ ಸಿಂಗ್ ಭಾರತದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಇದ್ದಿದ್ದರೆ ಟೀಮ್ ಇಂಡಿಯಾ ಗೆಲುವು ಸುಲಭವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್, ಶಮಿ ಜಸ್ ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾನಂತಹ ಫಾಸ್ಟ್ ಬೌಲರ್ ಗಳು ತಂಡದಲ್ಲಿದ್ದರೂ ಸಹ ಇಂಗ್ಲೆಂಡ್ ನೆಲದಲ್ಲಿ ಸ್ವಿಂಗ್ ಬೌಲಿಂಗ್ ಮಾಡುವಂತಹ ಭುವನೇಶ್ವರ್ ಕುಮಾರ್ ಅಗತ್ಯತೆ ತಂಡಕ್ಕಿದೆ. ಹೀಗಾಗಿ ಭುವನೇಶ್ವರ್ ಕುಮಾರ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಬೇಕಿತ್ತು. ಸ್ವಿಂಗ್ ಬೌಲರ್ ಗಳಿಲ್ಲದೆ ಇಂಗ್ಲೆಂಡ್ ನೆಲದಲ್ಲಿ ಭಾರತ ಸರಣಿಯನ್ನು ಗೆಲ್ಲುವುದು ತೀರಾ ಕಷ್ಟ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.