No menu items!
11.2 C
Munich
Friday, April 17, 2026

ಯಶ್ ಜೊತೆ ಅಲ್ಲು ಅರ್ಜುನ್ ಕಿರಿಕ್!

Must read

ಇತ್ತೀಚೆಗಷ್ಟೆ ತೆಲುಗಿನ ಕೆಲ ಚಿತ್ರಗಳು ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿಕೊಂಡು ದೊಡ್ಡ ಮಟ್ಟದ ಸಂಚಲನವನ್ನು ಹುಟ್ಟು ಹಾಕಿದ್ದವು. ಸಂಕ್ರಾಂತಿ ಹಬ್ಬದ ದಿನ ಮೂರ್ನಾಲ್ಕು ತೆಲುಗು ಚಿತ್ರಗಳು ಏಕಕಾಲಕ್ಕೆ ಬಿಡುಗಡೆ ಆಗುವುದರಿಂದ ದೊಡ್ಡ ಪೈಪೋಟಿಯೇ ಬಾಕ್ಸಾಫೀಸ್ ನಲ್ಲಿ ಏರ್ಪಡಲಿದೆ ಎಂಬ ಸುದ್ದಿಗಳು ಹೆಚ್ಚಾಗಿ ಹರಿದಾಡಿದ್ದವು.

 

ಆದರೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ಮಾತ್ರ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ. ಪುಷ್ಪಾ ಚಿತ್ರವೂ ಸಹ ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿತ್ತು. ಅದರೆ ಪುಷ್ಪಾ ಚಿತ್ರತಂಡ ಇಂದು ತಮ್ಮ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದ್ದು ಈ ವರ್ಷದ ಕ್ರಿಸ್ ಮಸ್ ಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗುವುದಾಗಿ ಪೋಸ್ಟರ್ ಒಂದನ್ನು ಹರಿಬಿಟ್ಟಿದೆ.

ಹೀಗೆ ಈ ಬಾರಿಯ ಕ್ರಿಸ್ ಮಸ್ ಹಬ್ಬದಂದು ಪುಷ್ಪಾ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ತಿಳಿದ ಕೂಡಲೇ ಈ ಬಾರಿ ಬಾಕ್ಸಾಫೀಸ್ ನಲ್ಲಿ ಕ್ರಿಸ್ಮಸ್ ಹಬ್ಬದಂದು ಯಶ್ ಮತ್ತು ಅಲ್ಲು ಅರ್ಜುನ್ ನಡುವೆ ವಾರ್ ನಡೆಯುವುದು ಪಕ್ಕಾ ಎಂದು ಸಿನಿಮಾ ಅಭಿಮಾನಿಗಳು ಚರ್ಚೆ ಆರಂಭಿಸಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರ ಕೂಡ ಈ ಬಾರಿಯ ಕ್ರಿಸ್ಮಸ್ ಹಬ್ಬದಂದು ಬಿಡುಗಡೆಯಾಗಲಿದ್ದು ಇದೀಗ ಪುಷ್ಪ ಕೆಜಿಎಫ್ 2 ಜೊತೆ ಹಣಾಹಣಿ ನಡೆಸಲು ಸಿದ್ಧವಾಗಿದೆ. ಹೀಗಾಗಿ ಈ 2ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿದ್ದು ಬಾಕ್ಸಾಫೀಸ್ ನಲ್ಲಿ ಯಶ್ ಮತ್ತು ಅಲ್ಲು ಅರ್ಜುನ್ ನಡುವೆ ವಾರ್ ನಡೆಯಲಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article