ನವರಸ ನಾಯಕ ಜಗ್ಗೇಶ್ ಹಾಗು ದರ್ಶನ್ ವಿಚಾರದ ಒಂದು ಆಡಿಯೋ ಕ್ಲಿಪ್ ಇದೀಗ ತುಂಬಾ ಸುದ್ದಿ ಮಾಡುತ್ತಿದೆ ಆ ಆಡಿಯೋದಲ್ಲಿ ಜಗ್ಗೇಶ್ ಅವರು ಒಬ್ಬ ನಿರ್ಮಾಪಕನ ಬಳಿ ತಮ್ಮ ಸಿನಿಮಾದ ಪ್ರಮೋಷನ್ ಬಗ್ಗೆ ಹಾಗೂ ಕೆಲವೊಂದು ಪತ್ರಿಕೆಗಳಲ್ಲಿ ಪ್ರಮೋಷನ್ ಮಾಡುವ ಬಗ್ಗೆ ಮಾತಾಡ್ತಿರ್ತಾರೆ ಹಾಗು ಒಬ್ಬ ಯೂಟ್ಯೂಬ್ ಪ್ರಮೋಷನ್ ಮಾಡುವ ಹುಡುಗನಿಗೆ ಏನಾದ್ರು ಕೊಡು ಅವನು ಮದುವೆ ಆಗಿದಾನೆ ಕಷ್ಟ ಪಡ್ತಾನೆ ನನ್ ಹತ್ರ ಇರವರೆಲ್ಲ ಅಂಥವರೇ ಬಟ್ ದರ್ಶನ್ ಥರ ಅವರ ಥರ ಇದ್ದಾರಲ್ಲ ಅವರ*** ತಲೆ ಮಾಂಸ ಕಳಸಿ ಅಣ್ಣಾ ನೂರ್ ಕುರಿ ಕಳಿಸಿ ಅಂತಣ್ಣ ಅನ್ನೋರೆಲ್ಲ ಯಾರು ನನ್ ಜೊತೆ ಇಲ್ಲ ಎಂಬ ಮಾತು ಎಲ್ಲೊ ಒಂದು ಕಡೆ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ ಎಂದು ಹೇಳಲಾಗುತ್ತಿದೆ,
ಇದೀಗ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ಅವರು ಚಿತ್ರ ಪ್ರಚಾರಕ್ಕೆ fake news speard ಮಾಡುವ ಹುನ್ನಾರ ಒಬ್ಬ ಚಿಕ್ಕ ಹುಡುಗನದು ಈ ಆಟ ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗೂ ತಿಳಿದಿದೆ ಇಂತ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಒಳಿತು ಈ ಪ್ರಯತ್ನ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ! ಎಂದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.