ಡಾ. ಶಂಕರೇಗೌಡ ಎಂದು. ಮಂಡ್ಯದೆಲ್ಲೆಲ್ಲ ಇವರು 5 ರೂಪಾಯಿ ಡಾಕ್ಟರ್ ಶಂಕರೇಗೌಡ್ರು ಎಂದೇ ಫೇಮಸ್. ಇವರ ಹೆಸರನ್ನು ಚಿಕ್ಕವರಿಂದ ಹಿಡಿದು ಯಾರನ್ನೂ ಕೇಳಿದರೂ ಹೇಳುತ್ತಾರೆ. ಇವರ ಸೇವೆಯೇ ಅಂತಹುದು. ನಮ್ಮ ಸಕ್ಕರೆ ನಾಡಿನ ಜನರಿಗೆ ಇವರು 5 ರೂಪಾಯಿ ಡಾಕ್ಟ್ರು ಶಂಕರೇಗೌಡ್ರು ಅಂತಾನೇ ಗೊತ್ತು. ಇವರು ಎಂಬಿಬಿಎಸ್. ಎಂಡಿ. ಚರ್ಮದ ರೋಗದ ನುರಿತ ತಜ್ಙರು.
ಮಂಡ್ಯದ ಈ ವೈದ್ಯ ಡಾ. ಶಂಕರೇಗೌಡ್ರು ಬಹಳ ವರ್ಷಗಳಿಂದ ಜನರಿಗೆ ಅತ್ಯಂತ ಕಡಿಮೆ ಅಂದರೆ ಕೇವಲ 5 ರೂಪಾಯಿ ಚಿಕಿತ್ಸೆ ನೀಡುತ್ತಾ ಬರುತ್ತಿದ್ದಾರೆ. ಅದು ಬಡವ ಇರಬಹುದು, ಬಲ್ಲಿದ ಇರಬಹುದು ಇವರ ಬಳಿಗೆ ಚಿಕಿತ್ಸೆಗೆಂದು ಬಂದವರಿಗೆ ಬರೀ 5 ರೂಪಾಯಿ ಮಾತ್ರನೇ ತೆಗೆದುಕೊಳ್ಳೊದು. ಇನ್ನು ಔಷಧಿ, ಮಾತ್ರೆಗಳನ್ನು ಕೂಡ ಅತ್ಯಂತ ತುಂಬಾ ರೇಟು ಕಡಿಮೆ ಇರೋದನ್ನೇ ಬರೆದುಕೊಡೋದು.
ಮಂಡ್ಯದ ಸುಭಾಷ್ ನಗರದಲ್ಲಿ ತಾರಾ ಕ್ಲಿನಿಕ್ ನಡೆಸುತ್ತಿರುವ ಇವರು ಚರ್ಮ , ಕುಷ್ಠ ಮತ್ತು ಲೈಂಗಿಕ ರೋಗ ಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಕೈ ಗುಣ ನೋಡಿ, ಈಗ ಮಂಡ್ಯ ಅಷ್ಟೇ ಅಲ್ಲ, ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಅಷ್ಟೇ ಏಕೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಕೂಡ 5 ರೂಪಾಯಿ ಡಾಕ್ಟ್ರು ಶಂಕರೇಗೌಡ್ರ ಹತ್ತಿರ ಹೋಗ್ತಾರೆ. ಎಷ್ಟೇ ರೋಗಿಗಳು ಬಂದ್ರು ನಗು ನಗುತ್ತಲೇ ಮಂಡ್ಯದ ಒರಟು ಭಾಷೆಯಲ್ಲಿ ಮಾತನಾಡುತ್ತ ಚಿಕಿತ್ಸೆ ನೀಡ್ತಾರೆ.
ಡಾ. ಶಂಕರೇಗೌಡ್ರು ಐದೇ ರೂಪಾಯಿ ಕಾರಣವೂ ಉಂಟು. ಸರ್ಕಾರದ ಹೊಸ ವಿಧೇಯಕದ ವಿರುದ್ಧ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದರೂ. ಈ ನಡುವೆಯೂ 5 ರೂಪಾಯಿಗೆ ವೈದ್ಯ ಡಾ. ಶಂಕರೇಗೌಡ ರೋಗಿಗಳ ಸೇವೆಯನ್ನು ಎಂದಿನಂತೆ ಮುಂದುವರೆಸಿದ್ದು, ವಿಶೇಷವಾಗಿತ್ತು. ಭಾರತೀಯ ವೈದ್ಯಕೀಯ ಸಂಘಕ್ಕೆ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿರುವ ಡಾ. ಶಂಕರೇಗೌಡ ಅವರು ಹಲವು ವರ್ಷಗಳಿಂದ ಚಿಕಿತ್ಸಾ ಶುಲ್ಕವನ್ನು 5 ರೂಪಾಯಿಗಿಂತ ಹೆಚ್ಚಿಸಿಲ್ಲ.
ಡಾ. ಶಂಕರೇಗೌಡ್ರು ಬರೀ 5 ರೂಪಾಯಿ ಫಿಕ್ಸ್ ಮಾಡಿರುವುದಕ್ಕೆ ಮಂಡ್ಯದ ಅನೇಕ ಡಾಕ್ಟರ್ ಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು ಉಂಟು. ಅದರೂ, ಅದಕ್ಕೆಲ್ಲಾ ಶಂಕರೇಗೌಡ್ರು ಕೇರ್ ಮಾಡಲ್ಲ ಅಂತಾ ಹೇಳ್ತಾರೆ ಮಂಡ್ಯ ಜನ. ಪ್ರತಿನಿತ್ಯ ಹಬ್ಬ ಹರಿದಿನ ಬಿಟ್ಟು, ಮಂಡ್ಯದಲ್ಲಿರುವ ತಾರಾ ಕ್ಲಿನಿಕ್ಗೆ ಬಂದ ನೂರಾರು ರೋಗಿಗಳಿಗೆ ಡಾ. ಶಂಕರೇಗೌಡರು ಚಿಕಿತ್ಸೆ ನೀಡುತ್ತಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕ್ಲಿನಿಕ್ ಗೆ ಬರುವ ಇವರು, ಸಾಲಿನಲ್ಲಿ ನಿಂತ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ಕೊಡುತ್ತಿದ್ದಾರೆ.
ಇನ್ನು ಮಂಡ್ಯದ ಸುಭಾಷ್ ನಗರದಲ್ಲಿರುವ ತಾರಾ ಕ್ಲಿನಿಕ್ ಗೆ ಬರುವ ಮುನ್ನ ಡಾ. ಶಂಕರೇಗೌಡ್ರು ತಮ್ಮ ಸ್ವಂತ ಊರಾದ ಶಿವಳ್ಳಿಯ ಸರ್ಕಲ್ ಕಟ್ಟೆಯ ಮೇಲೆ ಕುಳಿತುಕೊಂಡೇ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಾರೆ. ಅಷ್ಟೇ ಏಕೆ, ಗದ್ದೆಯಲ್ಲಿ ಕೆಲಸ ಮಾಡುತ್ತಾ ಇದ್ರೂ, ಅಲ್ಲಿಗೆ ಬರುವ ಬರೋ ರೋಗಿಗಳನ್ನು ನೋಡಿ, ಔಷಧಿ, ಮಾತ್ರೆಗಳನ್ನು ಬರೆದುಕೊಡ್ತಾರೆ. ಆದರೆ, ಏನಾದರೂ ಇಂಜಕ್ಷನ್ ಬೇಕೂ ಅಂದ್ರೆ, ಮಂಡ್ಯ ಶಾಪ್ಗೆ ಬರಬೇಕು. ಶಂಕರೇಗೌಡ್ರು ಠಾಕುಠೀಕಾಗಿ ಕಾಣೋ ಡಾಕ್ಟ್ರರಲ್ಲ, ಮಂಡ್ಯದ ಜನ ಇರೋ ರೀತಿ ವೆರಿ ಸಿಂಪಲ್ ಪರ್ಸನ್.
ಐದು ರೂಪಾಯಿ ಡಾಕ್ಟ್ರು ಶಂಕರೇಗೌಡ್ರು ಬರೀ ವೈದ್ಯರಷ್ಟೇ ಅಲ್ಲ. ಜನಪ್ರತಿನಿಧಿಯೂ ಕೂಡ. ಮಂಡ್ಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.ಈ ನಡುವೆಯೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ರು. ಆಗ ಅವರು, ಜನರು ನೀಡಿದ 5 ರೂಪಾಯಿಗಳ ಕಾಯಿನ್ ಗಳನ್ನೇ ಕೊಟ್ಟು ತಮ್ಮ ನಾಮಿನೇಷನ್ ಮಾಡಿದ್ರು. ಅಷ್ಟೊಂದು ಸರಳ ಜೀವಿ. ಇವರೊಂದು ರೀತಿ ದೇಶದ ದಂತಕಥೆ. ಬಡವರು ಎಂದರೆ ಡಾಕ್ಟ್ರು ಶಂಕರೇಗೌಡ್ರು ಸ್ವಲ್ಪ ಪ್ರೀತಿ ಜಾಸ್ತಿ. ಇನ್ನು ಎಷ್ಟೋ ಬಾರಿ ಆ ಐದು ರೂಪಾಯಿಗಳನ್ನು ಸಹ ಪಡೆಯುವುದಿಲ್ಲ.
ಒಟ್ಟಿನಲ್ಲಿ ದುಡ್ಡಿಗಾಗಿ ಏನೆಲ್ಲ ಮಾಡುವ ಜನರಿರುವ ಕಾಲದಲ್ಲಿ ಬರೀ 5 ರೂಪಾಯಿಗೆ ಚಿಕಿತ್ಸೆ ನೀಡುತ್ತಿರುವ ಶಂಕರಗೌಡ್ರು ತುಂಬಾ ಗ್ರೇಟ್ ಅಲ್ವಾ.!?
ಇಂಥಾ ದೊಡ್ಡ ಮನಸ್ಸು ಯಾವ ಡಾಕ್ಟ್ರಿಗಿದೆ ರೀ…?!
Date: