ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ ಆಗಲಿದೆ: ಹವಾಮಾನ ಇಲಾಖೆ

0
50

ಬೆಂಗಳೂರು: ಇಂದಿನಿಂದ ರಾಜ್ಯದಾದ್ಯಂತ 2 ದಿನ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಕೆಲವು ಭಾಗದಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಇಂದು ಸಹ ಸಿಲ್ಕ್ ಬೋರ್ಡ್, ದೊಮ್ಮಲೂರು, ಬೆಳ್ಳಂದೂರು ಭಾಗದಲ್ಲಿ ಮಳೆ ಬರಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗಳಲ್ಲಿ ಮೇ 24ವರೆಗೂ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಹ ಮೇ 24ವರೆಗೆ ಬಹುತೇಕ ವ್ಯಾಪಕ ಮಳೆ ಆಗಲಿದೆ. ಆದರೆ ಉತ್ತರ ಒಳನಾಡಿನಲ್ಲಿ ಹಲವು ಕಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 23ರ ನಂತರ ಮಳೆ ಇನ್ನಷ್ಟು ಚುರುಕುಗೊಳ್ಳಲಿದೆ. ದೇಶದಲ್ಲಿ ಮುಂಗಾರು ಮಾರುತಗಳು ಮೊದಲು ಎಂಟ್ರಿ ಪಡೆಯುವುದು ಕೇರಳ ರಾಜ್ಯಕ್ಕೆ, ಅನಂತರ ಕರ್ನಾಟಕದ ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆಯುತ್ತದೆ.
ಬೆಂಗಳೂರಿಗೆ ಯಾವುದೇ ಮಳೆ ಅರ್ಲಟ್ ಇಲ್ಲ. ಮೇ 25ರಿಂದ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.