ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸಂಜೆ ಅಮಿತ್ ಷಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜ್ಯದಲ್ಲಿ ಉಂಟಾದ ಅತಿವೃಷ್ಟಿಗೆ ಹಾಗೂ ಹಲವಾರು ವಿಚಾರಗಳ ಬಗ್ಗೆ ಪರಿಹಾರ ನೀಡುವಂತೆ ಹಾಗೂ ಚರ್ಚೆ ಮಾಡುವುದಕ್ಕೆ ಭೇಟಿ ಮಾಡುವ ಸಾಧ್ಯತೆ ಇತ್ತು ಆದರೆ ಅಮಿತ್ ಶಾ ಅವರು ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಕೇಂದ್ರದ ಗೃಹ ಇಲಾಖೆಯಿಂದ ಇನ್ನೂ ಭೇಟಿ ಮಾಡಿರುವ ಸಮಯವನ್ನು ನಿಗದಿಪಡಿಸಿಲ್ಲ ಹಾಗಾಗಿ ಯಡಿಯೂರಪ್ಪ ಹಾಗೂ ಅಮಿತ್ ಶಾ ಅವರ ಭೇಟಿ ನಾಳೆಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ .
ಆದರೆ ರಾಜ್ಯದಲ್ಲಿ ಇನ್ನೂ ಸಂಪುಟ ವಿಸ್ತರಣೆ ಆಗಿಲ್ಲ ಹೀಗಾಗಿ ಆ ವಿಚಾರದ ಬಗ್ಗೆಯೂ ಮಾತನಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿದ್ದರೂ ಸಚಿವ ಸಂಪುಟದ ಪಟ್ಟಿಯನ್ನು ಕೂಡ ತೆಗೆದುಕೊಂಡು ಹೋಗ್ತಾರೆ ಎಂದು ಹೇಳಲಾಗುತ್ತಿದೆ . ಹಾಗೂ ಯಡಿಯೂರಪ್ಪನವರ ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರ ಅವರ ಮುಂದಿನ ನಡೆ ಏನು ಎಂದು ಇನ್ನೂ ತಿಳಿದಿಲ್ಲ .
ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕರ್ನಾಟಕ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು , ಇಡೀ ಉತ್ತರ ಕರ್ನಾಟಕ ಜಿಲ್ಲೆಯ ನೀರಿನಲ್ಲಿ ಮುಳುಗಿಹೋಗಿತ್ತು ಹೀಗಾಗಿ ಆ ಜಿಲ್ಲೆಗಳಿಗೆ ಯಡಿಯೂರಪ್ಪನವರು ಭೇಟಿ ನೀಡುತ್ತಿದ್ದರೂ ಹಾಗಾಗಿ ಸಂಪುಟ ವಿಸ್ತರಣೆ ಮುಂದೂಡಲಾಗಿತ್ತು ಅಮಿಷಾ ಭೇಟಿಯ ನಂತರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ .