ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ ಎಂಬ ಆತಂಕ ಶುರು ಆಗಿದೆ.
ಮ್ಯಾಂಚೆಸ್ಟರ್ ನಲ್ಲಿ ಕಳೆದ 4 ದಿನಗಳಿಂದ ಮಳೆಯಾಗುತ್ತಿತ್ತು, ಆದರೆ ಶುಕ್ರವಾರ ಮೋಡಗಳು ಸರಿದು ಮಧ್ಯಾಹ್ನದವರೆಗೂ ಸೂರ್ಯ ಕಾಣಿಸಿಕೊಂಡಿದ್ದ, ಆದರೆ ಸಂಜೆ ವೇಳೆಗೆ ಮತ್ತೆ ಮಳೆ ಕಾಣಿಸಿಕೊಂಡಿತ್ತು.
ಇಂದು ಮಳೆ ಇಲ್ಲದ ಕಾರಣ ಟೀಂ ಇಂಡಿಯಾ ಮಧ್ಯಾಹ್ನ 1 ಗಂಟವರೆಗೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತ್ತು. ಮಧ್ಯಾಹ್ನದ ನಂತರ ಪಾಕ್ ತಂಡ ಅಭ್ಯಾಸಕ್ಕಿಳಿದಿತ್ತು. ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ನಾಳೆ ಗೆಲುವು ಯಾರ ಪಾಲಿಗೆ ಎಂಬುದನ್ನು ಕಾದು ನೋಡಬೇಕಾಗಿದೆ. ಹವಾಮಾನ ವರದಿ ಪ್ರಕಾರ ಮುಂಜಾನೆ ಅಲ್ಪ ಮಳೆಯಾಗುವ ಸಾಧ್ಯತೆ ಇದ್ದು, ಆ ಬಳಿಕ ಸೂರ್ಯ ಬಂದರು ಪಂದ್ಯದ ಸೆಕೆಂಡ್ ಆಫ್‍ಗೆ ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.