ಚಾಲೆಂಜ್ ಸ್ಟಾರ್ ದರ್ಶನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದಲ್ಲಿ ಇನ್ನೂ ಬಿಡುಗಡಯಾಗದ ರಾಬರ್ಟ್ ಸಿನಿಮಾ ದಾಖಲೆ ಬರೆಯ ಹೊರಟಿದೆ.
ಇನ್ನೂ ಸಿನಿಮಾವೇ ರಿಲೀಸ್ ಆಗಿಲ್ಲ.ಯಾವ ದಾಖಲೆ ಅಂತೀರಾ ಅದು ಟೀಸರ್ ಹವಾ..!
ಹೌದು ‘ಒಡೆಯ’ನ ಜನ್ಮದಿನದ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ದರ್ಶನ್ ಹೊಡೆದಿರುವ ಖಡಕ್ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಿದೆ.
ಮಧ್ಯರಾತ್ರಿ 12 ಗಂಟೆಗೆ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದು ದಾಖಲೆ ವೀಕ್ಷಣೆಯತ್ತ ಮುನ್ನುಗಿದೆ. ಟ್ರೆಂಡಿಂಗ್ ಗೆ ಪೈಪೋಟಿ ನಡೆಸುತ್ತಿದೆ.
ಇನ್ನು ದರ್ಶನ್ ಅಭಿಮಾನಿಗಳೊಡನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನಿಗೆ ವಿಶ್ ಮಾಡಿ, ಸೆಲ್ಫಿ ಕ್ಲಿಕ್ಕಿಸಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.