ಮೈತ್ರಿ ಸರ್ಕಾರ ರಚನೆ ನಿಟ್ಟಿನಲ್ಲಿ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದರಾದರೂ ಆದರೆ ನಿನ್ನೆ ರಾತ್ರೋರಾತ್ರಿ ಬಿಜೆಪಿ ನಡೆಸಿದ ಕಾರ್ಯತಂತ್ರಕ್ಕೆ ಮೈತ್ರಿಮಾಡಿಕೊಂಡು ಮುಂದುವರಿಯಬೆಕೆಂದಿದ್ದ ಸರ್ಕಾರ ಬೆಚ್ಚಿಬಿದ್ದಿದ್ದೆ. ದಿಢೀರ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್ಸಿಪಿಯ ಶಾಸಕಾಂಗ ನಾಯಕ ಅಜಿತ್ ಪವಾರ್ ಒಂದಷ್ಟು ಶಾಸಕರನ್ನು ಕರೆತಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದು ಬೆಳಿಗ್ಗೆ ನೆಡೆದ ಈ ಬೆಳವಣಿಗೆಯ ಬಳಿಕ ನಡೆದ ಮಹಾ ರಾಜಕೀಯ ಹೈಡ್ರಾಮಾದಂತೆ ಬಿಜೆಪಿ ಸರ್ಕಾರ ರಚನೆಯಾಗಿದೆ ಬೆಳಿಗ್ಗೆ ರಾಜಭವನದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳು ಪ್ರಮಾಣ ವಚನವನ್ನು ಸ್ವೀಕಾರ ಮಾಡಿದ್ರು .