ಸಿನಿಮಾವನ್ನು ಚೆನ್ನಾಗಿದೆ ಮತ್ತು ಚೆನ್ನಾಗಿಲ್ಲ ಹಿಂದೂ ಅಭಿಮಾನಿಗಳು ತಮ್ಮ ಅಭಿರುಚಿಗೆ ತಕ್ಕಂತೆ ವಿಂಗಡಣೆ ಮಾಡುತ್ತಾರೆ. ಕೆಲವರಿಗೆ ಇಷ್ಟವಾದ ಚಿತ್ರ ಮತ್ತೆ ಕೆಲವರಿಗೆ ಇಷ್ಟವಾಗುವುದಿಲ್ಲ, ಇಂತಹ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಚಿತ್ರಗಳು ಎಂದು ಹೇಳಲಾಗುತ್ತದೆ. ಆದರೆ ಮಿಶ್ರ ಪ್ರತಿಕ್ರಿಯೆಯನ್ನು ಸಹ ಪಡೆದುಕೊಳ್ಳದ ಬಾಕ್ಸಾಫೀಸ್ ನಲ್ಲಿ ನೆಲಕಚ್ಚಿದ ಕೆಲವೊಂದಷ್ಟು ಚಿತ್ರಗಳು ನಿಮಗೆ ತಿಳಿದಿರಬಹುದು.
ಅಂತಹ ಚಿತ್ರಗಳ ಪೈಕಿ ಮೊದಲನೆಯ ಸಾಲಿನಲ್ಲಿ ನಿಲ್ಲುವುದು ಬಾಲಿವುಡ್ ನ ‘ಬಾಂಬೆ ವೆಲ್ವೆಟ್’ ಸಿನಿಮಾ. ಈ ಸಿನಿಮಾ ಸೆಟ್ಟೇರಿದಾಗಿನಿಂದ ದೊಡ್ಡಮಟ್ಟದ ಹೈಪ್ ಕ್ರಿಯೇಟ್ ಮಾಡಿತ್ತು. ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಬಿಡುಗಡೆಯಾದ ಮೇಲೆ ನಿರೀಕ್ಷೆಯನ್ನು ಅರ್ಧದಷ್ಟು ಸಹ ತಲುಪಲು ಈ ಸಿನಿಮಾದ ಕೈನಲ್ಲಿ ಆಗಲಿಲ್ಲ.
ಹಿಂದೆಂದೂ ಕಂಡರಿಯದ ರೀತಿ ಸಿನಿಮಾವೊಂದು ಸೋತಿತ್ತು. ಬರೋಬ್ಬರಿ 120 ಕೋಟಿ ಬಜೆಟ್ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಾಕಿದ್ದು ಕೇವಲ 43 ಕೋಟಿಗಳನ್ನು ಮಾತ್ರ. ಹಾಕಿದ್ದ ಬಂಡವಾಳದ ಅರ್ಧದಷ್ಟನ್ನು ಸಹ ಈ ಸಿನಿಮಾ ಸಂಪಾದಿಸಲಿಲ್ಲ. ಬಹುದೊಡ್ಡ ಬಜೆಟ್ನಲ್ಲಿ ತಯಾರಾದ ಚಿತ್ರವೊಂದು ಈ ರೀತಿ ಸೋತಿದ್ದು ಇತಿಹಾಸದಲ್ಲೇ ಇರಲಿಲ್ಲ. ಆದರೆ ಬಾಂಬೆ ವೆಲ್ವೆಟ್ ಚಿತ್ರ ಅತಿ ಹೀನಾಯವಾಗಿ ಸೋಲು ವುದರ ಮೂಲಕ ಭಾರತ ಸಿನಿಮಾರಂಗದ ಇತಿಹಾಸದಲ್ಲಿಯೇ ಅತಿ ಕೆಟ್ಟ ದಾಖಲೆಯನ್ನು ಹೊಂದಿದೆ.