ಪುಷ್ಪಾ ಎಂಬ ಮುಂಬರುವ ಅಲ್ಲು ಅರ್ಜುನ್ ರವರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಹಿಳಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಕಾಂತೀಯ ಬೆಡಗಿ ರಶ್ಮಿಕಾ ಮಂದಣ್ಣ ಅವರು ಬಹುನಿರೀಕ್ಷಿತ ಸಿನಿಮಾದ ಪಾತ್ರವರ್ಗ ಮತ್ತು ತಾರಾಂಗಣಕ್ಕೆ ಸೇರಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ. ತಂಡವು ಶೂಟ್ ಪೋಸ್ಟ್ ಲಾಕ್‌ಡೌನ್ ಅನ್ನು ಪುನರಾರಂಭಿಸುತ್ತಿದ್ದಂತೆ ಪುಷ್ಪಾ ತಯಾರಕರು ಇತ್ತೀಚೆಗೆ ಪುಷ್ಪಾ ಸಿನಿಮಾದ ಸೆಟ್‌ಗಳಿಂದ ಪ್ರಮುಖ ತಾರೆ ಅಲ್ಲು ಅರ್ಜುನ್ ಅವರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈಗ ತಲುಗು, ತಮಿಳಿನಲ್ಲಿ ನಟಿಯಾಗಿ ಮಿಂಚುತ್ತಿದ್ದು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಕೂಡ ನಟನೆ ಮಾಡಲು ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶ ಹುಡುಕಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರಗಳಲ್ಲಿ ಕೂಡ ನಟಿ ರಶ್ಮಿಕಾ ಮಂದಣ್ಣ ಅವರು ಒಳ್ಳೆಯ ಹೆಸರು ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.ನಟಿ ಇತ್ತೀಚಿನ ಸಿನಿಮಾಗಳಿಗೆ 1 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿಗೆ ರಶ್ಮಿಕ ಮಂದಣ್ಣ ಅವರ 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇತ್ತು ಅವರ ಸಂಭಾವನೆ ಬಗ್ಗೆ ಊಹಾಪೋಹಗಳು ನಡೆಯುತ್ತಿದೆ ಬಿಟ್ಟರೆ ಖಚಿತವಾಗಿ ತಿಳಿದುಬಂದಿಲ್ಲ.