ಇದನ್ನು ನೋಡಿ ರಶ್ಮಿಕಾ ಕಲಿಯಬೇಕು!

Date:

ಅನುಷ್ಕಾ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಸಹ ಮೂಲತಃ ಕರ್ನಾಟಕದ ನಟಿಯರು. ಆದರೆ ಎಲ್ಲಾ ಒಂದೇ ರೀತಿ ಇರುವುದಿಲ್ಲ ಎಂಬ ಮಾತನ್ನು ಇವರಿಬ್ಬರನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು. ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಯಾವುದೇ ಚಿತ್ರದಲ್ಲಿ ಅಭಿನಯಿಸದೆ ನೇರವಾಗಿ ತೆಲುಗು ಚಿತ್ರರಂಗದ ಮೂಲಕ ಸ್ಟಾರ್ ಆದವರು.

 

 

ಆದರೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಜೀವನ ಕೊಟ್ಟಿತು ಕನ್ನಡ ಚಿತ್ರರಂಗ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಫೇಮಸ್ ಆದ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು ಚಿತ್ರಗಳಿಗೆ ಆಫರ್ ಬಂದವು. ಆದರೆ ಜೀವನ ಕೊಟ್ಟ ಕನ್ನಡ ಚಿತ್ರರಂಗಕ್ಕಾಗಲಿ ಅಥವಾ ಕನ್ನಡವನ್ನಾಗಲೀ ರಶ್ಮಿಕಾ ಮಂದಣ್ಣ ನೀಡಬೇಕಾದ ಗೌರವ ಮತ್ತು ಆದ್ಯತೆಯನ್ನು ನೀಡುತ್ತಿಲ್ಲ. ಕನ್ನಡ ಸಿನಿಮಾಗಳ ಬಗ್ಗೆ ಆಗಲಿ ಅಥವಾ ಕನ್ನಡಿಗರ ಬಗ್ಗೆ ಆಗಲಿ ಯಾವುದೇ ರೀತಿಯ ಪೋಸ್ಟ್ ಗಳನ್ನು ರಶ್ಮಿಕಾ ಮಂದಣ್ಣ ಹಾಕಲ್ಲ.

 

 

ಆದರೆ ನಟಿ ಅನುಷ್ಕಾ ಶೆಟ್ಟಿ ಹಾಗಲ್ಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡದೇ ಇದ್ದರೂ ಸಹ ತೆಲುಗು ಚಿತ್ರರಂಗ ಜೀವನ ಕೊಟ್ಟರೂ ಸಹ ಆಕೆ ಕನ್ನಡವನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮನೆಯ ಯಾವುದಾದರೂ ಹಬ್ಬ , ಕರ್ನಾಟಕದ ಯಾವುದಾದರೂ ಹಬ್ಬ ಅಥವಾ ಮನೆಯವರ ಹುಟ್ಟುಹಬ್ಬ ಇತರ ಸಮಾರಂಭಗಳಿಗೆ ಕನ್ನಡದಲ್ಲಿಯೇ ಶುಭ ಕೋರುತ್ತಾರೆ ಅನುಷ್ಕಾ ಶೆಟ್ಟಿ. ಇದೀಗ ಅನುಷ್ಕಾ ಶೆಟ್ಟಿ ಅವರ ತಂದೆ ಮತ್ತು ತಾಯಿಯ ವಿವಾಹ ವಾರ್ಷಿಕೋತ್ಸವ ಸಮಾರಂಭಕ್ಕೆ ಇಬ್ಬರ ಜೊತೆ ತಾವು ಇರುವ ಫೋಟೋವನ್ನು ಹಂಚಿಕೊಂಡು ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕನ್ನಡದಲ್ಲಿಯೇ ಕೋರಿ ಮತ್ತೊಮ್ಮೆ ಕನ್ನಡಿಗರ ಮನವನ್ನು ಗೆದ್ದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

 

 

ಈ ಪೋಸ್ಟ್ ನೋಡಿದ ಕನ್ನಡಿಗರು ರಶ್ಮಿಕಾ ಮಂದಣ್ಣ ಅವರು ನಟಿ ಅನುಷ್ಕಾ ಶೆಟ್ಟಿ ಅವರಿಂದ ಕಲಿಯಬೇಕಾದ್ದು ತುಂಬಾ ಇದೆ ಇದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡತೊಡಗಿದ್ದಾರೆ.

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...