ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ನಿನ್ನೆ ನೀಲಿ ಬಣ್ಣದ ಲ್ಯಾಂಬೋರ್ಗಿನಿಯನ್ನು ಕೊಂಡುಕೊಂಡ ಅಪ್ಪು ಮಡದಿಯ ಬಹುದಿನಗಳ ಇಷ್ಟದ ಲಾಂಬೋರ್ಗಿನಿ ಕಾರನ್ನ ಪ್ರೀತಿಯ ಮಡದಿ ಅಶ್ವಿನಿ ಅವರಿಗೆ ಉಡುಗೊರೆಯಾಗಿ ನೀಡಿ ಮಹಿಳಾ ದಿನಾಚರಣೆಯ ಸರ್ಪ್ರೈಸ್ ಕೊಟ್ಟಿದ್ದಾರೆ.
ಸುಮಾರು 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಕಾರು ಇದಾಗಿದೆ. ಅಪ್ಪು ಮನೆಗೆ ಆಗಮಿಸಿದ ಈ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಣ್ಣು ಕುಕ್ಕುವಂತಿದೆ. ರಾಜಕುಮಾರನ ಮನೆಗೆ ಲ್ಯಾಂಬೋರ್ಗಿನಿ ಎಂಟ್ರಿಯಾಗುತ್ತಿದ್ದಂತೆ, ಅಪ್ಪು ಹೊಸ ಕಾರನ್ನು ಏರಿ ಜಾಲಿ ರೈಡ್ ಮಾಡಿದ್ರು.
ಪುನೀತ್ ಮನೆಯಲ್ಲಿ ಸದ್ಯ ರೋಲ್ಸ್ ರಾಯ್ ಸೇರಿದಂತೆ ಅನೇಕ ಕಾರ್‍ಗಳ ಕಲೆಕ್ಷನ್ ಇದೆ. ದುಬಾರಿ ಬೈಕ್ ಗಳು ಸಹ ಪುನೀತ್ ಬಳಿ ಇದ್ದು. ಈಗ ಲ್ಯಾಂಬೋರ್ಗಿನಿ ಕೂಡ ಈ ಲಿಸ್ಟ್ ಗೆ ಸೇರ್ಪಡೆಯಾಗಿದೆ, ಒಟ್ಟಾರೆ ಇದೀಗ ಬಾಳಿಗೆ ಬೆಳಕಾಗಿ ಬಂದ ಧರ್ಮಪತ್ನಿ ಅಶ್ವಿನಿಗೆ ಮಹಿಳಾ ದಿನಾಚರಣೆಯ ದಿನವೇ ಇಷ್ಟದ ಉಡುಗೊರೆ ಕೊಡುವ ಮೂಲಕ ಮೂಲಕ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ.
ಇನ್ನು ಪುನೀತ್ ಅಭಿಮಾನಿಗಳು ಹೊಸ ಕಾರಿನ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ನಟಸಾರ್ವಭೌಮ ಸಕ್ಸಸ್ ನಂತರ ಹೊಸ ಕಾರು ಮನೆಗೆ ಬಂದಿರುವುದರಿಂದ ಡಬಲ್ ಖುಷಿಯಲ್ಲಿದ್ದಾರೆ ಪವರ್ ಸ್ಟಾರ್.