ಇದ್ದಕ್ಕಿದ್ದಂತೆ ಪತ್ರಕರ್ತನ ಮೇಲೆ ಸಿಟ್ಟಾದ ದರ್ಶನ್..! ಇದರಿಂದ ನಿಮಗೇನು ಉಪಯೊಗ ಅಂದ್ರು..?

Date:

ಯಜಮಾನ ಚಿತ್ರದ ಗಳಿಕೆ ಎಷ್ಟಾಗಿದೆ ಎಂಬ ಪ್ರಶ್ನೆಯೇ ದರ್ಶನ್ ಕಣ್ಣು ಕೆಂಪಾಗುವಂತೆ ಮಾಡಿತ್ತು.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಟ ದರ್ಶನ್, ಸಿನಿಮಾ ಯಶಸ್ವಿನ ಬಗ್ಗೆ ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳಿಗೆ ಪರೀಕ್ಷೆ, ಜನರಿಗೆ ಕ್ರಿಕೆಟ್ ಪಂದ್ಯ ಇದ್ದರೂ ಸಿನಿಮಾ ಸಕ್ಸಸ್ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ರಾಜಕೀಯ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ದರ್ಶನ್, ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಠಿ. ಸಿನಿಮಾ ಬಗ್ಗೆ ಏನಾದರೂ ಕೇಳಿ ಹೇಳುತ್ತೇನೆ. ಇಲ್ಲಿಗೆ ಬಂದಿರೋದು ನಾನು ಯಜಮಾನನಾಗಿ, ಬೇರೆ ವಿಚಾರಗಳನ್ನು ಬೇರೆ ಕಡೆ ನಾನು ಮಾತನಾಡುತ್ತೇನೆ ಎಂದರು.

ಇತ್ತ ಮಾಧ್ಯಮಗಳಿಂದ ಸಿನಿಮಾ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆ ಕೇಳಿ ಬರುತ್ತಿದಂತೆ ಗರಂ ಆದ ದರ್ಶನ್, ಅಷ್ಟೂ ಬೇಕೆಂದರೆ ನೀವೇ ಎಷ್ಟು ಥಿಯೇಟರ್ ಗಳಲ್ಲಿ ಚಿತ್ರ ಇದೆ. ಒಂದು ಶೋಗೆ ಎಷ್ಟು ಕಲೆಕ್ಷನ್ ಆಗುತ್ತೆ. ಹಾಗೇ ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಿ ಎಂದು ಸಿಡಿಮಿಡಿಗೊಂಡರು. ಚಿತ್ರವೊಂದಕ್ಕೆ 19 ಕೋಟಿ ರೂ. ಸಂಭಾವನೆ ಆಫರ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯಾರು ಸರ್. ನಿಮಗೆ ಹೇಳಿದ್ದು? ಅವರನ್ನು  ಕರೆದುಕೊಂಡು ಬನ್ನಿ ಸಿನಿಮಾ ಮಾಡುತ್ತೀನಿ.

ನೀವು ಹೀಗೆ ಹೇಳಿ ಹೇಳಿ ಐಟಿಯವರು ನಮ್ಮಲ್ಲಿ ಲೆಕ್ಕ ಕೇಳುತ್ತಾರೆ. ಅವರಿಗೆ ಕನ್ನಡ ಭಾಷೆ ಬರುವುದಿಲ್ಲ. ‘ದರ್ಶನ್ ತುಮಾರ ಪಾಸ್ ಇತ್ನಾ ಪೈಸಾಯೇ’ ಎಂದು ಕೇಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

 

Share post:

Subscribe

spot_imgspot_img

Popular

More like this
Related

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ ಬೆಂಗಳೂರು: ಕಳೆದ...

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್ ಮೇಲೆ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್...