ಆಂಧ್ರದಲ್ಲಿ ಪ್ರಚಂಡ ಬಹುಮತದ ಮೂಲಕ ನೂತನವಾಗಿ ಅಧಿಕಾರಕ್ಕೆ ಬಂದ ವೈ ಎಸ್ ಜಗನ್ ನೇತೃತ್ವದ ವೈ ಎಸ್ ಆರ್ ಕಾಂಗ್ರೆಸ್ ಸರಕಾರಕ್ಕೆ ಆರು ತಿಂಗಳ ಸಮಯಾವಕಾಶ ನೀಡೋಣ ಎಂದು ನಾವು ಮೊದಲು ಅಂದುಕೊಂಡಿದ್ದೆವು ಆದರೆ ಈಗ ಅದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಾ ಬಂದಿವೆ ಇದನ್ನು ನೋಡಿ ನಮಗೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಮಾಜಿ ಸಿ ಎಂ ಚಂದ್ರಬಾಬು ನಾಯ್ಡು ಹಾಲಿ ಸಿಎಂ ಜಗನ್ಮೋಹನ್ ರೆಡ್ಡಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಈ ರೀತಿ ತೊಂದರೆಗೆ ಒಳಪಡುವ ಕಾರ್ಯಕರ್ತರ ಸಹಯಯಕ್ಕೆಂದೇ ಟೋಲ್ ಫ್ರೀ ಸಹಾಯವಾಣಿಯನ್ನು ತೆರೆಯಲಾಗಿದ್ದು ಕಾರ್ಯಕರ್ತರು ಏನೇ ತೊಂದರೆಯಾದರೂ ಇದಕ್ಕೆ ಕರೆ ಮಾಡಿ ಬಳಸಿಕೊಳ್ಳಬಹುದು. ನಾವೆಲ್ಲರೂ ತೆಲುಗುದೇಶಂ ಕಾರ್ಯಕರ್ತರ ಪರವಾಗಿ ನಿಲ್ಲಲಿದ್ದೇವೆ ಎಂದು ಚಂದ್ರಬಾಬು ತಮ್ಮ ಪಕ್ಷದ ಕಾರ್ಯಕರ್ತರಿಗೆ ಭರವಸೆಯನ್ನು ನೀಡಿವ ಮೂಲಕ ಜಗನ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.