ಇನ್ನೂ 10ದಿನ ಲಾಕ್ ಡೌನ್

Date:

ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇರಳದಲ್ಲಿ ಇನ್ನೂ ಹತ್ತು ದಿನಗಳ ಕಾಲ ರಾಜ್ಯಾದ್ಯಂತ ಲಾಕ್ ಡೌನ್ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ(ಮೇ 29) ತಿಳಿಸಿದ್ದಾರೆ.
ಕೋವಿಡ್ 19 ಸೋಂಕು ತಡೆಗಟ್ಟಲು ಕೆಲವು ದಿನಗಳ ಹಿಂದಷ್ಟೇ ಮೇ 31ರವರೆಗೆ ಲಾಕ್ ಡೌನ್ ವಿಸ್ತರಿಸಿತ್ತು. ಆದರೆ ಈ ಬಾರಿ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಈ ಕಾರಣದಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 5ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕಡಿಮೆ ಸಂಖ್ಯೆಯ ಕಾರ್ಮಿಕರೊಂದಿಗೆ ಕೈಗಾರಿಕೆಗಳ ಚಟುವಟಿಕೆ ನಡೆಸಲು ಅವಕಾಶ ನೀಡಲಾಗುವುದು ಎಂದು ವರದಿ ತಿಳಿಸಿದೆ.


ಕಳೆದ 24ಗಂಟೆಗಳಲ್ಲಿ ಕೇರಳದಲ್ಲಿ 23,513 ಕೋವಿಡ್ 19 ಪ್ರಕರಣಗಳು ವರದಿಯಾಗಿದೆ. 1,41,759 ಸ್ಯಾಂಪಲ್ಸ್ ಪರೀಕ್ಷಿಸಲಾಗಿದೆ. 198 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 28,100 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿರುವುದಾಗಿ ಅಂಕಿಅಂಶ ತಿಳಿಸಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಜಾರಿಗೊಳಿಸಿದ್ದ ಹೆಚ್ಚುವರಿ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದರಿಂದ ಮೂರು ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಮೇ 21ರಂದು ತಿರುವನಂತಪುರಂ, ಎರ್ನಾಕುಲಂ, ತ್ರಿಶ್ಶೂರ್ ಮತ್ತು ಮಲಪ್ಪುರಂನಲ್ಲಿ ತ್ರಿವಳಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು.

Share post:

Subscribe

spot_imgspot_img

Popular

More like this
Related

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...