ತುರ್ತಿನ ವೇಳೆ ಹಣ ಪಡೆಯಲು ಎಟಿಎಂ ಒಂದು ಉತ್ತಮ ವ್ಯವಸ್ಥೆ. ಆದರೆ, ಕೆಲವೊಮ್ಮೆ ಎಟಿಎಂನಲ್ಲಿ ಹಣ ಇರುವುದೇ ಇಲ್ಲ. ಸದ್ಯ ಹಣ ಖಾಲಿಯಾದ ಎಟಿಎಂಗಳಲ್ಲಿ 3 ಗಂಟೆಗಳಲ್ಲಿ ಹಣ ತುಂಬದಿದ್ದರೆ ಅಂತಹ ಬ್ಯಾಂಕ್ ಗಳಿಗೆ ದಂಡ ವಿಧಿಸಲು ಆರ್ ಬಿಐ ಮುಂದಾಗಿದೆ.
ಈ ಬಗ್ಗೆ ಹೊಸ ಕಾನೂನು ರೂಪಿಸಲು ಚಿಂತನೆ ನಡೆಸಿದೆ. ಕೆಲವು ಎಟಿಎಂಗಳಲ್ಲಿ ದಿನಗಳೇ ಕಳೆದರೂ ಹಣ ತುಂಬದ ಪ್ರಕರಣಗಳು ವರದಿಯಾಗಿದ್ದರಿಂದ ಈ ಕ್ರಮಕ್ಕೆ ತೀರ್ಮಾನಿಸಲಾಗಿದೆ. ಹೀಗಾಗಿ ಇನ್ಮುಂದೆ ಎಟಿಎಂಗಳಲ್ಲಿ ಹಣ ಇಲ್ಲ ಅನ್ನೋ ಕೊರತೆ ದೂರಾಗಲಿದೆ.