ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತನ್ನ ವಿಚಿತ್ರ ಹಾಗೂ ವಿಭಿನ್ನವಾದ ಮ್ಯಾನರಿಸಂ ಮತ್ತು ಕಾಮಿಡಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದ ಮತ್ತು ಚರ್ಚೆಗೆ ಕಾರಣವಾಗಿದ್ದ ಸ್ಪರ್ಧಿ ಎಂದರೆ ಅದು ಆ್ಯಂಡಿ. ಸಹ ಸ್ಪರ್ಧಿಗಳನ್ನು ತನ್ನ ವಿಚಿತ್ರವಾದ ಮ್ಯಾನರಿಸಂ ನಿಂದಲೇ ಕೋಪಗೊಳಿಸುತ್ತಿದ್ದ ಆ್ಯಂಡಿ ಬಿಗ್ ಬಾಸ್ ಕಾರ್ಯಕ್ರಮದ ಮೋಸ್ಟ್ ಎಂಟರ್ ಟೈನಿಂಗ್ ಕ್ಯಾಂಡಿಡೇಟ್ ಆಗಿದ್ದರು. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರ ಸಖತ್ ಸೈಲೆಂಟ್ ಆಗಿದ್ದ ಆ್ಯಂಡಿ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು ಬಿಗ್ಬಾಸ್ ಆ್ಯಂಡಿ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಆ್ಯಂಡಿ ಅವರ ಜೀವನಕ್ಕೆ ಬಾಳ ಸಂಗಾತಿಯಾಗಿ ಬರುತ್ತಿರುವುದು ಅವರ ಬಾಲ್ಯದ ಗೆಳತಿ ಜನನಿ ಗಣೇಶ್. ಸದ್ಯ ಬೆಂಗಳೂರಿನ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಜನನಿ ಗಣೇಶ್ ಅವರು ಆ್ಯಂಡಿ ಅವರನ್ನು ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರಿಗೂ ಸಹ ಬಾಲ್ಯದಿಂದ ಸ್ನೇಹ ಇರುವುದರಿಂದ ಪರಸ್ಪರ ಪ್ರೀತಿಸಿ ಇದೀಗ ಮದುವೆ ಆಗಲು ತಯಾರಾಗಿದ್ದಾರೆ.