ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿ ಅವರು ಲೋಕಸಭೆ ಚುನಾವಣೆ ಸೋಲಿಗೆ ಕಾಂಗ್ರೆಸ್ ಸೋಲು ಅಂತ ನಾನು ಹೇಳುವುದಿಲ್ಲ. ನಾನು ಮಾಡಿದ ತಪ್ಪಿನಿಂದ ಸೋಲಾಯಿತು ಅಂತ ಹೇಳುತ್ತೇನೆ ಎಂದರು.
ಸಿದ್ದರಾಮಯ್ಯನವರು ನಿನ್ನೆ ಸ್ವಾಭಿಮಾನದ ಭಾಷಣ ಮಾಡಿದ್ದಾರೆ. ಆದರೆ, ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ಈಗ ಸಿದ್ದರಾಮಯ್ಯನವರ ಸ್ವಾಭಿಮಾನ ಎಲ್ಲಿ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ನೇತೃತ್ವದಲ್ಲೆ ಮಂಡ್ಯ, ತುಮಕೂರು, ಕೋಲಾರ ಸೋಲಲಿಕ್ಕೆ ಕಾರಣ ಯಾರೆಂದು ಹೇಳಬೇಕು, ಹದ್ದಾಗಿ ಕುಕ್ಕಿತಲ್ಲೊ ಎಂದು ಹೇಳಿದವರು ಸ್ಪಷ್ಟ ಪಡಿಸಬೇಕು. 7 ಬಾರಿ ಗೆದ್ದ ಮುನಿಯಪ್ಪನವರನ್ನು ಕುಕ್ಕಿದ್ದು ಯಾರು ಎಂದು ಅವರು ಹೇಳಬೇಕು, ಇವರ ನಾಟಕ ಎಲ್ಲಾ ಗೊತ್ತಿದೆ ನನಗೆ ಎಂದು ಪರೋಕ್ಷವಾಗಿ ರಮೇಶ್ ಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.