ಸೋನಿಯಾ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಬಹಿಷ್ಕರಿಸುವುದು ಸೇರಿ ದೇಶಾದ್ಯಂತ ಇವಿಎಂ ವಿರುದ್ಧ ಹೋರಾಟಕ್ಕೆ ರಾಹುಲ್ ಗಾಂಧಿ ತಂಡ ಸಿದ್ಧತೆ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕಾಂಗ್ರೆಸ್ ಡೇಟಾ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ನೀಡಿದ ಅವೈಜ್ಞಾನಿಕ ವರದಿಯಿಂದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವಂತಾಯಿತು ಎಂದು ವರದಿಗಳು ಬಂದಿದ್ದವು. ಕಳೆದೊಂದು ವರ್ಷದಲ್ಲಿ ಚುನಾವಣಾ ಆಯೋಗ ಖರೀದಿಸಿರುವ ಇವಿಎಂಗಳನ್ನು ಬಿಜೆಪಿ ಹ್ಯಾಕ್ ಮಾಡಿದೆ.ಹೀಗಾಗಿ ಇಂತಹ ಫಲಿತಾಂಶ ಬಂದಿದೆ ಎಂದು ಪ್ರವೀಣ್ ಚಕ್ರವರ್ತಿ ವರದಿ ಹೊಸ ನೀಡಿದ್ದಾರೆ ಎನ್ನಲಾಗಿದೆ.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಹುಲ್ ಗಾಂಧಿ ಅವರು ಇವಿಎಂ ಬಹಿಷ್ಕರಿಸಿ ಮತ್ತೆ ಮತಪತ್ರ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಆಂದೋಲನಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.