ಅನುಶ್ರೀ ಸದ್ಯ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ನಿರೂಪಕಿ. ನಿರೂಪಣೆಯಿಂದಲೇ ಸ್ಟಾರ್ ರೇಂಜಿಗೆ ಹೆಸರನ್ನು ಮಾಡಿರುವ ಅನುಶ್ರೀ ಅವರು ಅಪಾರವಾದ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾರೆ. ಇನ್ನು ನಿರೂಪಣೆಯನ್ನು ಹೊರತುಪಡಿಸಿ ಕೆಲವೊಂದಷ್ಟು ಚಿತ್ರಗಳಲ್ಲಿಯೂ ಸಹ ಅನುಶ್ರೀ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಅನುಶ್ರೀ ಅವರು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಕ್ಕೆ ನಿರೂಪಣೆಯನ್ನು ಮಾಡುತ್ತಿದ್ದು ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಹೀಗಿರುವ ಅನುಶ್ರೀ ಅವರ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.
ಇನ್ನು ಇಂತಹ ವಿಷಯಗಳ ಬಗ್ಗೆ ಇದುವರೆಗೂ ಸಹ ಅನುಶ್ರೀ ಅವರು ಮಾತನಾಡಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಈ ವಿಷಯದ ಕುರಿತು ಮೌನ ಮುರಿದಿದ್ದು ಗರಂ ಆಗಿದ್ದಾರೆ. ಒಂದು ಹುಡುಗಿ ಎಂದ ಮಾತ್ರಕ್ಕೆ ಮದುವೆ ಮಾಡುವ ಕಾತುರ ಜಗತ್ತಿಗೆ ಏಕೆ ಹುಟ್ಟಿಕೊಳ್ಳುತ್ತದೆ ಈಗಾಗಲೇ ಸುದ್ದಿಗಳ ಮೂಲಕ ನನಗೆ ಸಾಕಷ್ಟು ಬಾರಿ ಮದುವೆಯನ್ನು ಸಹ ಮಾಡಿಸಿಬಿಟ್ಟಿದ್ದಾರೆ ಎಂದು ಅನುಶ್ರೀ ಅವರು ಕಿಡಿಕಾರಿದರು. ಮದುವೆ ಎಂಬುದು ನನ್ನ ಸ್ವಂತ ನಿರ್ಧಾರ ಎಲ್ಲರಿಗೂ ಸಹ ತಿಳಿಸಿ ನಾನು ಅದನ್ನು ಒಂದು ದಿನ ಆಗುತ್ತೇನೆ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅನುಶ್ರೀ ಅವರು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.