ಈ ಆರ್ ಸಿ ಬಿ ಆಟಗಾರ ನನ್ನ ಐಡಲ್ ಎಂದ ವಾರ್ನರ್

0
42

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯ ಮಂಗಳವಾರ ( ಏಪ್ರಿಲ್ 27 ) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಿತು. ಟೂರ್ನಿಯಲ್ಲಿ ಸಮಬಲವನ್ನು ಸಾಧಿಸಿದ್ದ ಎರಡೂ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು, ಪಂದ್ಯದ ಕೊನೆಯ ಎಸೆತದವರೆಗೂ ನಡೆದ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್‌ನ ರೋಚಕ ಜಯವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

 

 

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 42 ಎಸೆತಗಳಿಗೆ ಅಜೇಯ 75 ರನ್ ಬಾರಿಸಿದ ಎಬಿ ಡಿವಿಲಿಯರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಹೀಗೆ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಎಬಿ ಡಿವಿಲಿಯರ್ಸ್ 5000 ಐಪಿಎಲ್ ರನ್‌ಗಳನ್ನು ಪೂರೈಸಿದರು. ಎಬಿ ಡಿವಿಲಿಯರ್ಸ್ ಈ ಮೈಲಿಗಲ್ಲನ್ನು ದಾಟಿದ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು.

 

ಎಬಿ ಡಿವಿಲಿಯರ್ಸ್ ಈ ಸಾಧನೆಯನ್ನು ಮಾಡಿದ ಕಾರಣಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸಹ ಸಂತಸವನ್ನು ವ್ಯಕ್ತಪಡಿಸಿದರು. ತಮ್ಮ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ಎಬಿ ಡಿವಿಲಿಯರ್ಸ್ ಅವರ ಈ ಸಾಧನೆಯನ್ನು ಕೊಂಡಾಡಿದರು. ‘ಲೆಜೆಂಡ್ ಎಬಿ ಡಿವಿಲಿಯರ್ಸ್, ಮೈ ಐಡಲ್’ ಎಂದು ಬರೆದುಕೊಳ್ಳುವ ಮೂಲಕ ವಾರ್ನರ್ ಎಬಿ ಡಿವಿಲಿಯರ್ಸ್ ಅವರಿಗೆ ಶುಭಾಶಯವನ್ನು ತಿಳಿಸಿದರು. ಈ ಮೂಲಕ ಡೇವಿಡ್ ವಾರ್ನರ್ ಕ್ರಿಕೆಟ್‍ನಲ್ಲಿ ತಮಗೆ ಎಬಿ ಡಿವಿಲಿಯರ್ಸ್ ಸ್ಫೂರ್ತಿ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

LEAVE A REPLY

Please enter your comment!
Please enter your name here