ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಡೇಟಿಂಗ್ ಮಾಡಬೇಕು ಅನ್ನೋ ಆಸೆಯನ್ನು ಸ್ಟಾರ್ ನಟಿಯೊಬ್ಬರು ಹೊರ ಹಾಕಿದ್ದಾರೆ.
ಹೌದು ,ಆ ಟಾಪ್ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ ಚೆಲುವೆ ಕರೀನಾ ಕಪೂರ್..!
ಹ್ಞಾಂ,ಕರೀನಾ ಕಪೂರ್ ಅವರಿಗೆ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಇಷ್ಟವಂತೆ. ರಾಹುಲ್ ಅವರೊಡನೆ ಡೇಟಿಂಗ್ ಮಾಡಬೇಕು ಎಂಬ ತಮ್ಮ ಬಯಕೆಯನ್ನು ಅವರು ಹೊರ ಹಾಕಿದ್ದಾರೆ.
ಸಿಮಿ ಗರೇವಾಲ್ ರ ಜನಪ್ರಿಯ ಚಾಟ್ ಶೋನಲ್ಲಿ ಕರೀನಾ ತಮ್ಮ ಈ ಹೆಬ್ಬಯಕೆಯನ್ನು ಬಹಿರಂಗ ಪಡಿಸಿದ್ದಾರೆ.
ಕರೀನಾ ಅವರಿಗೆ ರಾಹುಲ್ ಅವರ ಬಗ್ಗೆ ತಿಳಿದುಕೊಳ್ಳಲು ತುಂಬಾ ಸಕ್ತಿಯಿದೆಯಂತೆ.ಮ್ಯಾಗಜಿನ್ ಗಳಲ್ಲಿ ರಾಹುಲ್ ಅವರ ಫೋಟೋ ನೋಡುವಾಗ ಅವರೊಂದಿಗೆ ಏನೋ ಮಾತನಾಡಬೇಕು ಎಂದು ಯೋಚನೆ ಮಾಡುತ್ತಾರಂತೆ..!
‘ನಾನು ಸಿನಿಮಾ ಹಿನ್ನೆಲೆಯ ವಂಶಾವಳಿಯಿಂದ ಬಂದರೆ, ರಾಹುಲ್ ರಾಜಕೀಯ ಹಿನ್ನೆಲೆಯ ವಂಶಾವಳಿಯಿಂದ ಬಂದಿದ್ದಾರೆ. ಆದ್ದರಿಂದ ನಾವಿಬ್ಬರೂ ಒಂದು ನಿರ್ದಿಷ್ಟ ವಂಶಾವಳಿಯಿಂದ ಬಂದವರಾಗಿದ್ದು, ನಮ್ಮಿಬ್ಬರ ನಡುವೆ ಮಾತುಕತೆ ಬಹಳ ಆಸಕ್ತಿದಾಯಕವಾಗಿರಲಿದೆ ಎಂದು ಕರೀನಾ ಅಭಿಪ್ರಾಯ ಪಟ್ಟಿದ್ದಾರೆ.
ಈ ಟಾಪ್ ನಟಿಗೆ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡೋ ಆಸೆ.!
Date: