ರನ್ ಮಷಿನ್ ಕೊಹ್ಲಿ ಒಡಿಐನಲ್ಲಿ‌ ಯಾರ ವಿರುದ್ಧ ಅತೀ ಹೆಚ್ಚು ಸೆಂಚುರಿ ಬಾರಿಸಿದ್ದಾರೆ ಗೊತ್ತಾ?

0
239

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ಪ್ರತಿ ಪಂದ್ಯದಲ್ಲೂ ವಿರಾಟ ವೈಭವ ಇದ್ದಿದ್ದೇ…!
ರನ್ ಗಳಿಸುವುದು ಕೊಹ್ಲಿಗೆ ಕರಗತ.‌ಕ್ರಿಕೆಟ್ ದಿಗ್ಗಜರ ಒಂದೊಂದೋ ರೆಕಾರ್ಡ್ ಪುಡಿಗಟ್ಟುತ್ತಿರುವ ಕೊಹ್ಲಿ ದಾಖಲೆಗಳ ಸರದಾರ.
ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಿನ್ನೆ ನಡೆದ 2ನೇ ಒಡಿಐನಲ್ಲೂ ವಿರಾಟ್ ದಾಖಲೆಯ ಆಟ ಆಡಿದರು.
40ನೇ ಶತಕ ಬಾರಿಸಿದ ಕೊಹ್ಲಿ ಅತೀವೇಗವಾಗಿ‌ 9 ಸಾವಿರ ರನ್ ಬಾರಿಸಿದ ನಾಯಕ ಎನ್ನುವ ಗೌರವ ಪಡೆದರು.‌‌ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಯಾವ ಒಬ್ಬ ನಾಯಕ ಕೂಡ ಕೊಹ್ಲಿಯಷ್ಟು ವೇಗವಾಗಿ ರನ್ ಗಳಿಸಿಲ್ಲ.‌ ಕೊಹ್ಲಿ ಕೇವಲ 159 ಇನ್ನಿಂಗ್ಸ್ ಗಳಲ್ಲಿ‌ 9 ಸಾವಿರ ರನ್ ಗಳಿಸಿರುವ ಸಾಧನೆ ಮಾಡಿದ್ದಾರೆ.
ಹಾಗೆಯೇ‌ ನಿನ್ನೆ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ 10 ಬೌಂಡರಿಗಳನ್ನು ಒಳಗೊಂಡಿತ್ತು.‌ ಈ ಬೌಂಡರಿಗಳ ಮೂಲಕ ಕೊಹ್ಲಿ 1000 ಬೌಂಡರಿ ಬಾರಿಸಿದ ಕೀರ್ತಿಗೆ ಪಾತ್ರರಾದರು.
ಇನ್ನು ವಿರಾಟ್ ಏಕದಿನ ಕ್ರಿಕೆಟ್ ನಲ್ಲಿ ಬಾರಿಸಿದ 40 ಏಕದಿನ ಶತಕಗಳು ಯಾರ್ಯಾರ ವಿರುದ್ಧ ಎಂದು ನೋಡುವುದಾದರೆ , ಶ್ರೀಲಂಕಾ ವಿರುದ್ಧ ಅತೀ ಹೆಚ್ಚು ಅಂದರೆ‌ 8 ಶತಕ ಸಿಡಿಸಿದ್ದಾರೆ.
ಎರಡನೇ ಅತೀ ಹೆಚ್ಚು ಶತಕ ಆಸ್ಟ್ರೇಲಿಯಾ ‌ಮತ್ತು ವೆಸ್ಟ್ ಇಂಡೀಸ್ ವಿರುದ್ಧ. ಈ ಎರಡು‌ ದೇಶಗಳ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ತಲಾ‌ 7 ಸೆಂಚುರಿಗಳು ಕೊಹ್ಲಿ ಬ್ಯಾಟಿನಿಂದ ಬಂದಿವೆ.
ನ್ಯೂಜಿಲೆಂಡ್ ವಿರುದ್ಧ 5, ದಕ್ಷಿಣ ಆಫ್ರಿಕಾ ವಿರುದ್ಧ 4, ಬಾಂಗ್ಲಾದೇಶ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3, ಪಾಕಿಸ್ತಾನದ ವಿರುದ್ಧ 2, ಜಿಂಬಾಬ್ವೆ ವಿರುದ್ಧ 1 ಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ.
ಇನ್ನು ಮುಖ್ಯವಾಗಿ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ ನಿನ್ನೆ ಬಾರಿಸಿದ್ದು ಆಸೀಸ್ ವಿರುದ್ಧ 6ನೇ ಶತಕ..! ಈ ಮೂಲಕ ಡೇವಿಡ್ ಗೋವರ್, ಬ್ರಿಯಾನ್ ಲಾರಾ‌ ಹಾಗೂ ಕ್ಲೈವ್ ಲಾಯ್ಡ್ ಅವರನ್ನು ಹಿಂದಿಕ್ಕಿದ್ದಾರೆ.
2017 ರಿಂದೇಚೆಗೆ ಕೊಹ್ಲಿ ಸಿಡಿಸಿದ 14ನೇ ಒಡಿಐ ಶತಕ ಈ 40 ನೇ ಸೆಂಚುರಿ..! 12 ಶತಕ ಬಾರಿಸಿರೊ ರೋಹಿತ್ ಶರ್ಮಾ ಮತ್ತು 6 ಶತಕ ಬಾರಿಸಿರುವ ಜಾನಿ ಬೈರ್ ಸ್ಟೋವ್ 2017 ರ ಬಳಿಕ ಅತೀ‌ ಹೆಚ್ಚು ಶತಕಗಳಿಸಿದವರ ಪೈಕಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here