ಈ ಪ್ರದೇಶಗಳಲ್ಲಿ 2 ದಿನಗಳ ಕಾಲ ನೀರಿನ ಸಮಸ್ಯೆ ಇರಲಿದೆ

Date:

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 30ರಿಂದ ಜುಲೈ 1ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮಾಹಿತಿ ನೀಡಿದೆ.
ಟಿಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪಿಂಗ್ ಸ್ಟೇಷನ್‌ಗಳಲ್ಲಿ ರಿಪೇರಿ ಕಾರ್ಯ ನಡೆಯುತ್ತಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ತಿಳಿಸಿದೆ. 5.6 ಕಿ.ಮೀ ಚೈನೇಜ್‌ನಲ್ಲಿ (1950 ಮಿಲಿ ಮೀಟರ್) ನೀರು ಸೋರಿಕೆ ರಿಪೇರಿ ಹಾಗೂ ಇತರೆ ವಿದ್ಯುತ್, ತಾಂತ್ರಿಕ ಕೆಲಸಗಳ ಕಾರಣ ನೀರು ಸರಬರಾಜಿಗೆ ತೊಡಕಾಗುವುದಾಗಿ ತಿಳಿಸಿದೆ.

ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳು: ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ ದಾಸರಹಳ್ಳಿ, ಎಚ್‌ಎಂಟಿ ವಾರ್ಡ್, ಪೀಣ್ಯ 2ನೇ ಹಂತ, ಮುರನೇ ಹಂತ, ನಾಲ್ಕನೇ ಹಂತ, ರಾಜಗೋಪಾಲ ನಗರ, ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮೀದೇವಿ ನಗರ, ಬಿಎಚ್‌ಸಿಎಸ್ ಲೇಔಟ್, ಬಿಡಿಎ ಲೇಔಟ್‌ನ ಹ್ಯಾಪಿ ವ್ಯಾಲಿ, ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1ನೇ ಬ್ಲಾಕ್, 4ನೇ ಬ್ಲಾಕ್, 4ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್ ಎಎಸ್‌ಸಿ ಸೆಂಟರ್, ಸಿದ್ಧಾರ್ಥ ಕಾಲೋನಿ, ವೆಂಕಟಪುರ, ಟೀಚರ್ಸ್ ಕಾಲೋನಿ, ಜಕ್ಕಸಂದ್ರ, ಜಕ್ಕಸಂದ್ರ ಎಕ್ಸ್‌ಟೆನ್ಷನ್, ಜಯನಗರ 4ನೇ ಟಿ ಬ್ಲಾಕ್‌ನ ಎಸ್‌ಟಿ ಬೆಡ್ ಪ್ರದೇಶ, ಅರಸು ಕಾಲೋನಿ, ತಿಲಕನಗರ, ಎನ್‌ಇಐ ಲೇಔಟ್, ಈಸ್ಟ್‌ ಎಂಡ್ ಎ ಮತ್ತಿ ಬಿ ಮುಖ್ಯ ರಸ್ತೆಗಳು, ಕೃಷ್ಣಪ್ಪ ಗಾರ್ಡನ್, ಬಿಎಚ್‌ಇಎಲ್ ಲೇಔಟ್, ಬಿಟಿಎಂ 2ನೇ ಹಂತ, ಮೈಕೋ ಲೇಔಟ್, ಎನ್ಎಸ್ ಪಾಳ್ಯ, ಗುರಪ್ಪನ ಪಾಳ್ಯ, ಸದ್ದುಗುಂಟೆಪಾಳ್ಯ, ಬಿಸ್ಮಿಲ್ಲಾ ನಗರ, ಜೆಪಿ ನಗರದ 4 ರಿಂದ 8ನೇ ಹಂತದ ಪ್ರದೇಶಗಳು, ಪುಟ್ಟೇನಹಳ್ಳಿ, ಆರ್‌ಬಿಐ ಲೇಔಟ್, ಪಾಂಡುರಂಗ ನಗರ, ಅರಕೆರೆ, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಲೇಔಟ್, ಚುಂಚಘಟ್ಟ, ಕೋಣನಕುಂಟೆ, ಎಸ್‌ಬಿಎಂ ಲೇಔಟ್, ಸುಪ್ರೀಂ ರಸಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಡಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನ ಹಳ್ಳಿ ವಿಲೇಜ್‌ನಲ್ಲಿ ನೀರಿನ ವ್ಯತ್ಯಯವಾಗಲಿದೆ.

ಎಚ್‌ಎಸ್‌ಆರ್ ಲೇಔಟ್‌ನ 1-7ನೇ ವಿಭಾಗಗಳು, ಅಗರಹಳ್ಳಿ, ಮಂಗಮ್ಮನ ಪಾಳ್ಯ, ಮದೀನಾ ನಗರ, ಐಟಿಐ ಲೇಔಟ್, ಹೊಸ ಲೇಔಟ್ ಪಾಳ್ಯ, ಬಂಡೆ ಪಾಳ್ಯ, ಚಂದ್ರಾ ಲೇಔಟ್, ಬಿಇಎಂಎಲ್ ಲೇಟೌಟ್ 1-5ನೇ ಹಂತ, ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಲೇಔಟ್‌ನ ಎಲ್ಲಾ ಹಂತಗಳು, ಬಿಇಎಲ್ ಲೇಔಟ್‌ನ ಎಲ್ಲಾ ಹಂತಗಳು, ಮಲ್ಲತ್ತಹಳ್ಳಿ, ಉಲ್ಲಾಳ, ಡಿ ಗ್ರೂಪ್ ಲೇಔಟ್, ರೇಲ್ವೆ ಲೇಔಟ್, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ 6ನೇ ಬ್ಲಾಕ್, ಬಸವೇಶ್ವರ ನಗರ, ಮಂಜುನಾಥ ನಗರ, ನಂದಿನಿ ಲೇಔಟ್, ಗೊರಗುಂಟೆ ಪಾಳ್ಯ, ಶಂಕರ ನಗರ, ಪ್ರಕಾಶ್ ನಗರ, ಕುರುಬರಹಳ್ಳಿ, ಶಂಕರಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಬಿಇಎಂಎಲ್ ಲೇಔಟ್, ಕೆಎಚ್‌ಬಿ ಕಾಲೋನಿ, ಶಿವನಗರ, ಅಗ್ರಹಾರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...