ಈ ಬಾರಿಯ ಐಪಿಎಲ್ ವೇಳಾಪಟ್ಟಿ ಲೀಕ್.. ಇಲ್ಲಿದೆ ನೋಡಿ ಮ್ಯಾಚ್ ಟೇಬಲ್..!!
ಕಳೆದ ಬಾರಿಯಂತೆ ಈ ಬಾರಿಯೂ ಐಪಿಎಲ್ ಅನ್ನ ಕಣ್ತುಂಬಿಕೊಳ್ಳಲ್ಲು ಭಾರತೀಯ ಕ್ರಿಕೆಟ್ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.. ಆದರೆ ಈ ಬಾರಿ ಈ ಕ್ರಿಕೆಟ್ ಹಂಗಾಮ ಭಾರತದಲ್ಲಿ ನಡೆಯೋದು ಡೌಟ್ ಎನ್ನಲಾಗ್ತಿದೆ.. ಅದಕ್ಕೆ ಪುಷ್ಟಿ ನೀಡುವಂತಿದೆ ಲೀಕ್ ಆಗಿದೆ ಎನ್ನಲಾದ ಐಪಿಎಲ್ ವೇಳಪಟ್ಟಿ..
ಹೌದು, ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಮ್ಯಾಚ್ ನ ವೇಳಾಪಟ್ಟಿ ಹರಿದಾಡುತ್ತಿದ್ದು ಇದರ ಅನುಸಾರ 12 ನೇ ಆವೃತ್ತಿಯ ಐಪಿಎಲ್ ಯುಎಇ ನಲ್ಲಿ ನಡೆಯಲಿದೆಯಂತೆ..
ಮಾರ್ಚ್ 29 ರಂದು ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದ್ರಾಬಾದ್ ನಡುವೆ ಪಂದ್ಯವಾಳಿ ನಡೆಯಲಿದೆ.. ಫೈನಲ್ ಮ್ಯಾಚ್ ಮೇ 19 ರಂದು ನಡೆಯಲ್ಲಿದೆ ಎಂಬ ವೇಳಾಪಟ್ಟಿ ಇದಾಗಿದೆ.. ಈ ಹಿಂದೆಯೆ ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸಿ ಗೆದ್ದಿರುವ ಬಿಸಿಸಿಐ, ಈ ಬಾರಿ ಲೋಕ ಸಭಾ ಎಲೆಕ್ಷನ್ ಹಿನ್ನೆಲೆಯಲ್ಲಿ ಪರ ದೇಶದಲ್ಲಿ ಟೂರ್ನಿಯನ್ನ ಆಯೋಜಿಸುತ್ತ ಅನ್ನೋದನ್ನ ಕಾದು ನೋಡ್ಬೇಕು..