ಈ ಬಾರಿಯ ದಸರಾಗೆ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಸಂಬಂಧ ಇದೇನಪ್ಪಾ ಹೀಗೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ? ಮುಖ್ಯಮಂತ್ರಿಯೂ ಅಲ್ಲ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಹ ಅಲ್ಲ ಆದರೂ ಈ ಬಾರಿಯ ದಸರಾಗೂ ಸಿದ್ದರಾಮಯ್ಯನವರಿಗೂ ಯಾವ ಲಿಂಕ್ ಎಂದು ನೀವು ಯೋಚಿಸುತ್ತಿರಬಹುದು ಆದರೆ ಈ ಬಾರಿಯ ದಸರಾ ಸಿದ್ದರಾಮಯ್ಯನವರಿಗೂ ಲಿಂಕ್ ಇದೆ. ಹೌದು ಈ ಬಾರಿಯ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ದಸರಾ ಕಾರ್ಯಗಳನ್ನು ನಿಂತು ನೋಡಿಕೊಂಡರು.
ಇನ್ನು ದಸರಾ ಕಾರ್ಯಕ್ರಮ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ದಸರಾವನ್ನು ತುಂಬಾ ವಿಜೃಂಭಣೆಯಿಂದ ನಡೆಸಲು ನನಗೆ ಅವಕಾಶ ಸಿಕ್ಕಿದ್ದು ಖುಷಿ ಎಂದು ಹೇಳಿಕೊಂಡರು. ಇನ್ನು ದಸರಾ ತಯಾರಿ ವೇಳೆ ನಾನು ಕನ್ಫ್ಯೂಸ್ ಆದಾಗ ಸಿದ್ದರಾಮಯ್ಯನವರಿಗೆ ಎರಡು ಮೂರು ಬಾರಿ ಕರೆ ಮಾಡಿ ಯಾವ ರೀತಿ ತಯಾರಿ ನಡೆಸಿದರೆ ಒಳ್ಳೆಯದು ಎಂದು ಸಲಹೆಗಳನ್ನು ಪಡೆದಿದ್ದೇನೆ ಎಂದು ಸೋಮಣ್ಣ ಅವರು ಹೇಳಿಕೊಂಡರು.