ಈ ಭಾರಿಯ ಚುನಾವಣೆ ರೂಲ್ಸ್ ಕೇಳಿದ್ರೆ ನೀವು ಆಶ್ಚರ್ಯವಾಗೋದಂತು ಪಕ್ಕಾ..!

Date:

ಕೇಂದ್ರ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ ಹಾಗಾಗಿ ನಿನ್ನೆಯಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಏಪ್ರಿಲ್ 18 ರಂದು 14 ಸ್ಥಾನ, ಏಪ್ರಿಲ್ 23ರಂದು ಉಳಿದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 23ರಂದು ಮತಗಳ ಎಣಿಕೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ಏಪ್ರಿಲ್‌ 18ರಂದು ನಡೆಯಲಿದೆ. 3ನೇ ಹಂತದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. 4ನೇ ಹಂತ 29 ಏಪ್ರಿಲ್, 5ನೇ ಹಂತ ಮೇ6ರಂದು, ಮೇ 12ಕ್ಕೆ 6ನೇ ಹಂತ, 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.

ಈ ಬಾರಿಯ ಚುನಾವಣೆಯಲ್ಲಿ ನೀವು ಗಮನಿಸಬೇಕಾದ ಹಾಗೂ ಅಚ್ಚರಿಗೆ ಒಳಗಾಗುವ ಹಲವು ಅಂಶಗಳು ಇಲ್ಲಿದೆ..!
೧. ಈ ಬಾರಿ ಮತದಾರ ಮಾರ್ಗದರ್ಶಿಯನ್ನು ಪ್ರತಿ ಮನೆ ಮನೆಗೂ ಹಂಚಲಾಗುವುದು. ಇದರಲ್ಲಿ ದಿನಾಂಕ, ಸಮಯ, ಬೂತ್ ಮಟ್ಟದ ಅಧಿಕಾರಿಗಳ ವಿವರ, ಮಹತ್ವದ ವೆಬ್‌ಸೈಟ್‌ಗಳು, ಸಹಾಯವಾಣಿ ಸಂಖ್ಯೆ, ಮತಗಟ್ಟೆಯಲ್ಲಿ ಗುರುತಿಗೆ ನೀಡಬೇಕಾದ ದಾಖಲೆ, ಮತದಾರರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ವಿವರಗಳನ್ನು ಇದರ ಮೂಲಕ ತಿಳಿಸಲಾಗುವುದು.

 

೨. ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಅವುಗಳ ಏಜೆಂಟ್‌ಗಳು ಬಳಸುವ ಮೈಕ್‌ಗಳ ಬಳಕೆಯ ಮೇಲೆ ಕೆಲವು ನಿರ್ಬಂಧಗಳನ್ನು ಆಯೋಗ ಹೇರಿದೆ. ಮೈಕ್‌ಗಳ ಮೂಲಕ ಪ್ರಚಾರದಿಂದಾಗಿ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳು, ಕಾಯಿಲೆ ಪೀಡಿತರು ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು, ಹೆಚ್ಚು ಹಿರಿಯ ನಾಗರಿಕರು ವಾಸವಾಗಿರುವ ಸ್ಥಳಗಳಲ್ಲಿ ಮೈಕ್‌ಗಳನ್ನು ಬಳಸುವಂತಿಲ್ಲ.
೩. ವಿವಿಪ್ಯಾಟ್ ಹಾಗೂ ಅಂಚೆ ಮತದಾನದ ಪೇಪರ್‌ನಲ್ಲಿ ಆಯಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಫೋಟೊವನ್ನು ಪ್ರಕಟಿಸಲಾಗುತ್ತದೆ. ಒಂದೇ ಹೆಸರಿನ ಅಭ್ಯರ್ಥಿಗಳು ಒಂದೇ ಕ್ಷೇತ್ರದಿಂದ ವಿವಿಧ ಪಕ್ಷಗಳಿಂದ ಚುನಾವಣೆ ಸ್ಪರ್ಧೆಯಲ್ಲಿರುವ ಸಂದರ್ಭದಲ್ಲಿ ಮತದಾರರಿಗೆ ತಾವು ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತಿದ್ದೇವೆ ಎನ್ನುವ ಗೊಂದಲ ಉಂಟಾಗುತ್ತದೆ ಹಾಗಾಗಿ ಎಲ್ಲಾ ಅಭ್ಯರ್ಥಿಗಳ ಫೋಟೊವನ್ನು ಮತಯಂತ್ರದ ಮೇಲೆ ಅಂಟಿಸಲಾಗುತ್ತದೆ.

೪. ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಇಲ್ಲವೇ ಎಂಬುದನ್ನು ಜನತೆಗೆ ಖಚಿತಪಡಿಸಲು ಕೇಂದ್ರೀಯ ಚುನಾವಣಾ ಆಯೋಗ ಮತದಾರರ ಪರಿಶೀಲನೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಆರಂಭಿಸಿದೆ. ಇದರಡಿ 1950ಕ್ಕೆ ಎಸ್‌ಎಂಎಸ್ ಮಾಡುವ ಮೂಲಕ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.
ಒಟ್ಟಾರೆ 2019ರ ಲೋಕಸಭಾ ಚುನಾವಣೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ನಿಷ್ಟ ಹಾಗೂ ನ್ಯಾಯಸಮ್ಮತ ಮತದಾನ ನಡೆಸಲು ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ.

 

Share post:

Subscribe

spot_imgspot_img

Popular

More like this
Related

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್ ಬೆಂಗಳೂರು: ತಿನ್ನುವ...

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ ಬೆಂಗಳೂರು: ವಿಜಯ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ ಮಟ್ಟಕ್ಕೆ ಕುಸಿತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ...

ಲಂಕಾ ನೆಲದಲ್ಲಿ ಕ್ರಿಕೇಟ್ ಕ”ಲಾ”ರವ !

ಲಂಕಾ ನೆಲದಲ್ಲಿ ಕ್ರಿಕೇಟ್ ಕ"ಲಾ"ರವ ! "ಲಾಯರ್" ಗಳ ಬಗ್ಗೆ ನಿಮಗೆಲ್ಲ ಗೊತ್ತೆ...