ಹೌದು, ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ನೀವು ಹೋಗುತ್ತಿರುವ ದಾರಿ ಸರಿ ಇಲ್ಲ ಇನ್ನೊಮ್ಮೆ ಯೋಚನೆ ಮಾಡಿ ಅಂತ ಯತೀಂದ್ರ ಅವರು ಹೇಳಿದ್ದರಂತೆ. ಇದಲ್ಲದೇ ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡುವುದಕ್ಕೂ ಯತೀಂದ್ರ ವಿರೋಧ ವ್ಯಕ್ತಪಡಿಸಿದ್ದರು ಆದರೆ ಇದೆಲ್ಲ ರಾಜಕಾರಣ ನಿನಗೆಲ್ಲ ಇದು ತಿಳಿಯುವುದಿಲ್ಲ ಅಂತ ಸುಮ್ಮನೆ ಇರಿಸಿದ್ದರಂತೆ. ಮೈಸೂರಿನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಇರುವುದು ತಮ್ಮ ಗೆಲುವಿಗೂ ತೊಂದರೆ ಆಗಬಹುದು.ಆದ್ದರಿಂದ ಆ ಎರಡು ವಿಷಯಗಳಲ್ಲಿ ಜಾಗೃತೆಯ ಹೆಜ್ಜೆ ಇಡಿ ಎಂದು ಸಿದ್ದರಾಮಯ್ಯಗೆ ಯತೀಂದ್ರ ಹೇಳಿದ್ದರು ಎನ್ನಲಾಗಿದೆ.
ಒಟ್ಟಿನಲ್ಲಿತ ತಮ್ಮ ಮಗನ ಮಾತು ಕೇಳದೇ ಸಿದ್ದರಾಮಯ್ಯ ಅವರು ಲಿಂಗಾಯತ ಹಾಗೂ ಒಕ್ಕಲಿಗರ ವಿರೋಧ ಕಟ್ಟಿಕೊಂಡರು ಆ ಕಾರಣದಿಂದ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಟಿ ದೇವೇಗೌಡರ ವಿರುದ್ದ ಸೋಲು ಕಂಡರು ಎನ್ನಲಾಗುತ್ತಿದೆ.