ಉದ್ಯೋಗ ಕಳೆದುಕೊಂಡ ಪತಿ, ಡ್ರೈವರ್ ಆದ ಪತ್ನಿ..!

1
166

ಉದ್ಯೋಗ ಕಳೆದುಕೊಂಡ ಪತಿ, ಡ್ರೈವರ್ ಆದ ಪತ್ನಿ..!

ಈಕೆಯ ಹೆಸರು ಪೂಜಾ ದೇವಿ. ವಯಸ್ಸು 33 ವರ್ಷ. ಮೂರು ಮಕ್ಕಳ ತಾಯಿಯಾದ ಈಕೆ, ಟ್ಯಾಕ್ಸಿ ಹಾಗೂ ಲಾರಿ ಚಾಲನೆಯ ತರಬೇತಿ ನೀಡುವ ಕೆಲಸ ಮಾಡುತ್ತಿದ್ದರು. ಜಮ್ಮುವಿನ ಸ್ಥಳೀಯ ಡ್ರೈವಿಂಗ್ ಸ್ಕೂಲ್‌ ಒಂದರಲ್ಲಿ ತರಬೇತುದಾರರಾಗಿ ಕೆಲಸ ಮಾಡ್ತಿದ್ದ ಈಕೆ, ಇದೀಗ ಖಾಸಗಿ ಬಸ್‌ನ ಡ್ರೈವರ್ ಆಗಿದ್ದಾರೆ. ಇದಕ್ಕೆ ಕಾರಣ ಲಾಕ್‌ಡೌನ್..!
ಡ್ರೈವಿಂಗ್ ಸ್ಕೂಲ್‌ನಲ್ಲಿ ತರಬೇತುದಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ಮಹಿಳೆಗೆ ತಿಂಗಳಿಗೆ 5 ಸಾವಿರ ರೂ. ಕೂಡಾ ಸಂಬಳ ಸಿಗುತ್ತಿರಲಿಲ್ಲ. ಹೀಗಾಗಿ, ಹೆಚ್ಚಿನ ಸಂಪಾದನೆಗಾಗಿ ಈಕೆ ಬಸ್ ಚಾಲನೆಯ ಕಾರ್ಯಕ್ಕೆ ಇಳಿದರು. ಇದೀಗ ಜಮ್ಮುನ ಪ್ರಥಮ ಬಸ್ ಡ್ರೈವರ್ ಆಗಿ ಈಕೆ ಹೆಸರುವಾಸಿಯಾಗಿದ್ದಾರೆ.
ಜಮ್ಮು ಹಾಗೂ ಕಟುವಾ ನಡುವಣ ನಾನ್‌ಸ್ಟಾಪ್‌ ಬಸ್‌ನಲ್ಲಿ ಚಾಲಕಿಯಾಗಿ ಈಕೆ ಕಳೆದ ನಾಲ್ಕು ದಿನಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ ಈಕೆಗೆ 600 ರೂ. ಕೂಲಿ ಸಿಗುತ್ತಿದೆ. ಕೋವಿಡ್‌ ಕಾಲ ಆರಂಭವಾದ ಬಳಿಕ ಇದೇ ನನಗೆ ಅತಿ ಹೆಚ್ಚಿನ ಕೂಲಿ ಎನ್ನುತ್ತಾರೆ, ಅವರು. ಲಾಕ್‌ಡೌನ್ ಹಾಗೂ ಕೊರೊನಾ ವೈರಸ್‌ ಆರ್ಭಟವನ್ನು ನಾನು ಸವಾಲಾಗಿ ತೆಗೆದುಕೊಂಡೆ ಎನ್ನುತ್ತಾರೆ, ಪೂಜಾ.
ವೈದ್ಯರು, ದಾದಿಯರು ಹಾಗೂ ಸಂಶೋಧಕರು ತಮ್ಮ ಸಮಯವನ್ನು ಕೊರೊನಾ ನಿಯಂತ್ರಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಹೀಗಿರುವಾಗ ನಾವೇಕೆ ಸವಾಲಾಗಿ ಸ್ವೀಕರಿಸಬಾರದು ಎಂದು ಪ್ರಶ್ನಿಸುತ್ತಾರೆ, ಪೂಜಾ.. ಕಟುವಾದ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಈಕೆ ತಮ್ಮ ಮಕ್ಕಳನ್ನು ಜಮ್ಮುಗೆ ಕರೆತಂದಿದ್ದಾರೆ. ಇಲ್ಲಿಯೇ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಈಕೆಯ 7 ವರ್ಷದ ಕೊನೆಯ ಮಗ ಬಸ್‌ನಲ್ಲೇ ತಾಯಿಯ ಜೊತೆ ಇರುತ್ತಾನೆ.
ಕಳೆದ ಸೆಪ್ಟಂಬರ್‌ನಲ್ಲಿ ಅನ್‌ಲಾಕ್‌ 4.0 ಅಡಿ ಕಣಿವೆ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಆರಂಭವಾಗಿದೆ. ಹೀಗಾಗಿ, ಬಸ್‌ ಚಾಲನೆಯ ವೃತ್ತಿಗೆ ಧುಮುಕಲು ಪೂಜಾ ಅವರಿಗೆ ನೆರವಾಯ್ತು. ಈಕೆಯ ಈ ಸಾಹಸವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಉದಂಪುರ ಸಂಸದ ಜಿತೇಂದ್ರ ಸಿಂಗ್, ಆಕೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ಬಾರಿ SSLC , PUC ಪರೀಕ್ಷೆ ಯಾವಾಗ?

ಪ್ರತಿವರ್ಷ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ನಲ್ಲಿ ನಡೆಯುತ್ತವೆ. ಆದರೆ ಈ ವರ್ಷ ಕೊರೊನಾ ಪರಿಣಾಮದಿಂದಾಗಿ ಇನ್ನೂ ಶಾಲೆಗಳೇ ಪುನರಾರಂಭಗೊಂಡಿಲ್ಲ. ಆನ್‌ಲೈನ್‌ ತರಗತಿಗಳ ಮೂಲಕ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾರ್ಚ್‌ನಲ್ಲೇ ಪರೀಕ್ಷೆ ನಡೆಯಬಹುದಾ? ಅಥವಾ ಪರೀಕ್ಷೆ ಯಾವಾಗಿನಿಂದ ಆರಂಭವಾಗಬಹುದು ಎಂಬುದನ್ನು ತಿಳಿಯಲು ಕಾತುರರಾಗಿದ್ದಾರೆ. ವಿದ್ಯಾರ್ಥಿಗಳ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಎಂದಿನಂತೆ ಈ ವರ್ಷ ಮಾರ್ಚ್‌ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಖಚಿತಪಡಿಸಿದ್ದಾರೆ.

“ಈ ಬಾರಿ ಕೋವಿಡ್-19 ಶಿಕ್ಷಣ ಕ್ಷೇತ್ರಕ್ಕೆ ಬಾರೀ ಹೊಡೆತ ಉಂಟುಮಾಡಿದೆ. ಈ ಹಿನ್ನೆಲೆ ಶೈಕ್ಷಣಿಕ ವರ್ಷ ಕಡಿತವಾಗಿದೆ. ಜನವರಿ 1 ರಿಂದ ಶಾಲೆ-ಕಾಲೇಜುಗಳು ಆರಂಭ ಆಗುತ್ತಿರುವುದರಿಂದ ಈ ಬಾರಿ ಎಂದಿನಂತೆ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸಲಾಗುವುದಿಲ್ಲ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲವೆಂದು ಮಾಧ್ಯಮದವರಿಗೆ ತಿಳಿಸಿದ್ದಾರೆ”.

ಈ ಎರಡು ಪರೀಕ್ಷೆಗಳ ವೇಳಾಪಟ್ಟಿ ಕುರಿತು, ಮುಂದಿನ ಒಂದು ವಾರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಸದ್ಯ ವೇಳಾಪಟ್ಟಿ ರೂಪಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲದೆ, ಶೈಕ್ಷಣಿಕ ಅವಧಿಯ ಅನುಗುಣವಾಗಿ ಪಠ್ಯಕ್ರಮ ಕಡಿತ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನೂ ಶಾಲೆಗಳ ಆರಂಭ ವಿಚಾರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಲ್ಲದಿರುವ ತಾಲೂಕುಗಳಲ್ಲಿ ಹಂತ ಹಂತವಾಗಿ ಎಂದಿನಂತೆಯೇ ಶಾಲೆಗಳನ್ನು ಪುನರಾರಂಭಿಸುವ ವಿಚಾರ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಹೇಗಿದೆ ಗೊತ್ತಾ ಐಸಿಸಿ ಟಿ20, ಒಡಿಐ, ಟೆಸ್ಟ್ ಟೀಮ್..!

2010ರ ದಶಕ ಇನ್ನೇನು ಮುಕ್ತಾಯಗೊಳ್ಳುವ ಸಮಯ ಬಂದಾಗಿದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತನ್ನ ಆಯ್ಕೆಯ ದಶಕದ ಶ್ರೇಷ್ಠ ಟೆಸ್ಟ್‌, ಟಿ20-ಐ ಮತ್ತು ಒಡಿಐ ತಂಡಗಳನ್ನು ರಚನೆ ಮಾಡಿದೆ.
ಐಸಿಸಿ ತನ್ನ ಈ ತಂಡ ರಚಿಸುವ ಸಲುವಾಗಿ ಶೇ. 10ರಷ್ಟು ಅಭಿಪ್ರಾಯವನ್ನು ಅಭಿಮಾನಿಗಳಿಂದ ವೋಟಿಂಗ್‌ ಮೂಲಕ ಸ್ವೀಕರಿಸಿದ್ದು, ಉಳಿದ 90ರಷ್ಟು ಭಾಗವನ್ನು ತನ್ನ ಪರಿಣತರಿಂದ ಪಡೆದುಕೊಂಡಿದೆ.
ಈ ರೀತಿ ಅಂತಿಮ ಗೊಳಿಸಲಾದ ಟೆಸ್ಟ್, ಟಿ20-ಐ ಮತ್ತು ಒಡಿಐ ತಂಡಗಳನ್ನು ಐಸಿಸಿ ಭಾನುವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಬಹಿರಂಗ ಪಡಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿಗೆ ಟಿ20-ಐ ಮತ್ತು ಒಡಿಐ ತಂಡಗಳನ್ನು ಮುನ್ನಡೆಸುವ ಅವಕಾಶ ಸಿಕ್ಕರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವ ಪಡೆದುಕೊಂಡಿದ್ದಾರೆ.
ಎಂಎಸ್‌ ಧೋನಿ ಐಸಿಸಿ ಆಯೋಜಿಸುವ ಟೂರ್ನಿಗಳಾದ ಟಿ20 ಕ್ರಿಕೆಟ್ ವಿಶ್ವಕಪ್‌, ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲಿ ಟ್ರೋಫಿ ಎತ್ತಿ ಹಿಡಿದ ವಿಶ್ವದ ಏಕಮಾತ್ರ ನಾಯಕ ಎಂಬ ವಿಶೇಷ ದಾಖಲೆ ಹೊಂದಿದ್ದಾರೆ.
ಅದರಲ್ಲೂ 2011ರಲ್ಲಿ ಭಾರತ ತಂಡ 2ನೇ ಬಾರಿ ಒಡಿಐ ವಿಶ್ವಕಪ್‌ ಗೆದ್ದ ಸಂದರ್ಭದಲ್ಲಿ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಧೋನಿ ಮ್ಯಾಚ್‌ ವಿನ್ನಿಂಗ್ ಅಜೇಯ 91 ರನ್‌ಗಳನ್ನು ಚೆಚ್ಚಿ ಮಿಂಚಿದ್ದರು. ಧೋನಿ 2020ರ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಒಟ್ಟಾರೆ ಐಸಿಸಿ ಪ್ರಕಟಿಸಿದ ಟೆಸ್ಟ್‌, ಟಿ20-ಐ ಮತ್ತು ಒಡಿಐ ತಂಡಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಐಸಿಸಿ ದಶಕದ ಏಕದಿನ ಕ್ರಿಕೆಟ್‌ ತಂಡ
1. ರೋಹಿತ್ ಶರ್ಮಾ (ಓಪನರ್‌)
2. ಡೇವಿಡ್‌ ವಾರ್ನರ್‌ (ಓಪನರ್‌)
3. ವಿರಾಟ್ ಕೊಹ್ಲಿ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ಎಬಿ ಡಿ’ವಿಲಿಯರ್ಸ್‌ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಶಕಿಬ್ ಅಲ್‌ ಹಸನ್ (ಆಲ್‌ರೌಂಡರ್‌)
6. ಎಂಎಸ್‌ ಧೋನಿ (ವಿಕೆಟ್‌ಕೀಪರ್‌/ನಾಯಕ)
7. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌)
8. ಮಿಚೆಲ್‌ ಸ್ಟಾರ್ಕ್ (ಎಡಗೈ ವೇಗಿ)
9. ಟ್ರೆಂಟ್ ಬೌಲ್ಟ್‌ (ಎಡಗೈ ವೇಗಿ)
10. ಇಮ್ರಾನ್‌ ತಾಹಿರ್‌ (ಲೆಗ್‌ ಸ್ಪಿನ್ನರ್‌)
11. ಲಸಿತ್‌ ಮಾಲಿಂಗ (ಬಲಗೈ ವೇಗಿ)
ಐಸಿಸಿ ದಶಕದ ಅಂತಾರಾಷ್ಟ್ರೀಯ ಟಿ20 ತಂಡ
1. ರೋಹಿತ್‌ ಶರ್ಮಾ (ಓಪನರ್‌)
2. ಕ್ರಿಸ್‌ ಗೇಲ್‌ (ಓಪನರ್‌)
3. ಆರೊನ್‌ ಫಿಂಚ್‌ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ವಿರಾಟ್‌ ಕೊಹ್ಲಿ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಎಬಿ ಡಿ’ವಿಲಿಯರ್ಸ್‌ (ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್)
6. ಗ್ಲೆನ್‌ ಮ್ಯಾಕ್ಸ್‌ವೆಲ್‌ (ಬ್ಯಾಟಿಂಗ್‌ ಆಲ್‌ರೌಂಡರ್‌)
7. ಎಂಎಸ್‌ ಧೋನಿ (ವಿಕೆಟ್‌ಕೀಪರ್‌/ನಾಯಕ)
8. ಕೈರೊನ್ ಪೊಲಾರ್ಡ್‌ (ಆಲ್‌ರೌಂಡರ್‌
9. ರಶೀದ್‌ ಖಾನ್ (ಲೆಗ್‌ ಸ್ಪಿನ್ನರ್‌)
10. ಜಸ್‌ಪ್ರೀತ್ ಬುಮ್ರಾ (ಬಲಗೈ ವೇಗಿ)
11. ಲಸಿತ್‌ ಮಾಲಿಂಗ (ಬಲಗೈ ವೇಗಿ)

ಐಸಿಸಿ ದಶಕದ ಟೆಸ್ಟ್‌ ತಂಡ
1. ಅಲಸ್ಟೈರ್ ಕುಕ್ (ಓಪನರ್)
2. ಡೇವಿಡ್‌ ವಾರ್ನರ್‌ (ಓಪನರ್)

3. ಕೇನ್ ವಿಲಿಯಮ್ಸನ್ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ವಿರಾಟ್ ಕೊಹ್ಲಿ (ನಾಯಕ/4ನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಸ್ಟೀವ್ ಸ್ಮಿತ್‌ (ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್)

6. ಕುಮಾರ ಸಂಗಕ್ಕಾರ (ವಿಕೆಟ್‌ಕೀಪರ್‌)
7. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌)
8. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌)
9. ಡೇಲ್‌ ಸ್ಟೇನ್ (ಬಲಗೈ ವೇಗಿ)
10. ಸ್ಟುವರ್ಟ್‌ ಬ್ರಾಡ್‌ (ಬಲಗೈ ವೇಗಿ)
11. ಜೇಮ್ಸ್‌ ಆಂಡರ್ಸನ್ (ಬಲಗೈ ವೇಗಿ)

 

 

1 COMMENT

LEAVE A REPLY

Please enter your comment!
Please enter your name here