No menu items!
14.8 C
Munich
Monday, September 14, 2026

ರೇವ್ ಪಾರ್ಟಿ…ತೆಲುಗು ನಟಿ ಹೇಮಾ ಮತ್ತು ಇತರ ನಟಿಯರು ಭಾಗಿ..!

Must read

ಬೆಂಗಳೂರು:- ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಅರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಮತ್ತು ಇತರ ನಟಿಯರು ಭಾಗಿಯಾಗಿದ್ದರು.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಜಿಅರ್ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದಾಗ ಆಂಧ್ರ ಪ್ರದೇಶ ಮತ್ತು ಬೆಂಗಳೂರು ಮೂಲದ ಸುಮಾರು 100 ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ.

ಅವರಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಕೆಲ ಬೇರೆ ನಟಿಯರೂ ಇದ್ದರು. ಪೊಲೀಸರು 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಅಲ್ಲಿಂದ ವಶಪಡಿಸಿಕೊಂಡಿದ್ದಾರೆ. ಆಂದ್ರಪ್ರದೇಶದ ಶಾಸಕರೊಬ್ಬರ ಕಾರ್ ಪಾರ್ಕಿಂಗ್ ಪಾಸ್ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಬರಾಮತ್ತಾಗಿದೆ. ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article