ಸಾಮಾಜಿಕ ಜಾಲತಾಣ ಎಷ್ಟು ಅನುಕೂಲಕರವೋ ಅಷ್ಟೇ ಅನನುಕೂಲ & ಮಾರಕ ಕೂಡ ಹೌದು. ಇದರಿಂದ ಉಪಯೋಗದ ಜೊತೆ ಅಹಿತಕರ ಘಟನೆಗಳೂ ಸಹ ನಡೆಯುತ್ತವೆ & ನಡೆಯುತ್ತಾ ಇವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿ ಹರಿದಾಡುವ ವಿಚಾರಗಳೇ ಹೆಚ್ಚು. ಹೌದು ಫೇಸ್‌ಬುಕ್ , ಇನ್ ಸ್ಟಾಗ್ರಾಮ್ & ಟ್ವಿಟರ್ ನಲ್ಲಿ ಕೆಲವೊಂದಷ್ಟು ಫೇಕ್ ಸುದ್ದಿಗಳು ಆಗಾಗ ಕಿಡಿಗೇಡಿಗಳಿಂದ ಹರಿದಾಡುತ್ತವೆ.
ಇದೇ ರೀತಿಯ ಸುದ್ದಿ ಇದೀಗ ಕನ್ನಡದ ಹಿರಿಯ ನಟಿ ಉಮಾಶ್ರೀ ಅವರ ಬಗ್ಗೆ ಹರಿದಾಡಿದೆ. ಹೌದು ನಟಿ ಉಮಾಶ್ರೀ ಅವರು ಇನ್ನಿಲ್ಲ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ ಎಂದು ಸ್ವತಃ ಉಮಾಶ್ರೀ ಅವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆ ಮೂಲಕ ಯಾರು ಯಾರು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದೀರೋ ಅವರಿಗೆಲ್ಲಾ ಧನ್ಯವಾದಗಳು ಎಂದು ಹೇಳುವುದರ ಮೂಲಕ ಕಿಡಿಗೇಡಿಗಳ ಕಾಲೆಳೆದಿದ್ದಾರೆ.