ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಶಿಕಲಾ ನಟರಾಜನ್ ಗೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆಂಟಿನಜನ್ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ನೆಗಟೀವ್ ಬಂದಿದೆ., ಗಂಟಲು ದ್ರವ ಪರೀಕ್ಷೆ ವರದಿ ಬರಬೇಕಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.ಶಶಿಕಲಾರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ಉಸಿರಾಟದ ಸಮಸ್ಯೆ ಕಂಟ್ರೋಲ್ ಗೆ ಬರದ ಹಿನ್ನಲೆ ತಡರಾತ್ರಿ ಐಸಿಯುಗೆ ಶಿಪ್ಟ್ ಮಾಡಿದ ವೈದ್ಯರು ಉಸಿರಾಟ ಸಮಸ್ಯೆ ಹಿನ್ನಲೆ ಆಕ್ಸಿಜನ್ ಪೂರೈಕೆ ಮಾಡಿದರು ಜ್ವರ ಮತ್ತು ಕಫದ ಸಮಸ್ಯೆ ಅಲ್ಪ ಸುಧಾರಣೆ ಯಾಗಿದೆ ಬಿಪಿ ಶುಗರ್ ನಾರ್ಮಲ್ ರಿಪೋರ್ಟ್ ಬಂದಿದ್ದು ಆಂಟಿಜೆನ್ ಟೆಸ್ಟ್ ನೆಗಿಟಿವ್ ಬಂದಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಇಂದು ಬರಲಿದೆ ಶಶಿಕಲಾರನ್ನ ಭೇಟಿಯಾಗಲು ನೆನ್ನೆ ತಡರಾತ್ರಿ ತಮಿಳುನಾಡಿನಿಂದ ಕುಟುಂಬಸ್ಥರು ಬಂದಿದ್ದು ಯಾರಿಗೂ ಅವಕಾಶ ಕೊಟ್ಟಿಲ್ಲ ಬೌರಿಂಗ್ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.