ಎರಡು ದಶಕಗಳ ನಂತರ ಮತ್ತೆ ತೆರೆಯ ಮೇಲೆ ಒಂದಾದ ಈ ಜೋಡಿ.!

Date:

ಬರೋಬ್ಬರಿ ಎರಡು ದಶಕ! ಹೌದು. ಇಪ್ಪತ್ತು ವರುಷಗಳ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಜೋಡಿಯ ಹೆಸರು ಅಮಿತಾಬ್ ಬಚ್ಚನ್ ಮತ್ತು ರಮ್ಯಾ ಕೃಷ್ಣ. 1998ರಲ್ಲಿ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಜೊತೆಯಾಗಿ ತೆರೆಯನ್ನು ಹಂಚಿಕೊಂಡ ಬಿಗ್ ಬಿ ಮತ್ತು ರಮ್ಯಾ ಕೃಷ್ಣ ಈಗ ಮತ್ತೆ ಒಂದಾಗಿದ್ದಾರೆ. ಕಾಲಿವುಡ್​ ನಲ್ಲಿ ತಯಾರಾಗುತ್ತಿರುವ ‘ಉರ್ಯಾಂಧ ಮನಿಧನ್’ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರ ಮುಂದೆ ಬರಲಿದೆ ಈ ಜೋಡಿ. ತಮಿಳ್ವಾನನ್ ನಿರ್ದೇಶನ ಮಾಡಲಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದೆ.

ಈ ಸಿನಿಮಾ ಮೂಲಕ ಮೊದಲ ಬಾರಿಗೆ ಬಿಗ್ ಬಿ ಕಾಲಿವುಡ್ ನಲ್ಲಿ ಅಭಿನಯಿಸುತ್ತಿದ್ದಾರೆ.ತಮಿಳಿನ ಜೊತೆಗೆ ಹಿಂದಿ ಭಾಷೆಯಲ್ಲಿಯೂ ಈ ಚಿತ್ರ ತೆರೆ ಕಾಣಲಿದೆ.

ಪ್ರಸ್ತುತ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಸೋಮವಾರ ಸಣ್ಣ ಸುಳಿವು ಸಿಕ್ಕಿತ್ತು. ಹಣೆಗೆ ವಿಭೂತಿ, ಹೆಗಲ ಮೇಲೆ ವಸ್ತ್ರ, ಪಂಚೆ ತೊಟ್ಟ ಫೋಟೋವೊಂದು ಜಾಲತಾಣದಲ್ಲಿ ಹರಿದಾಡಿತ್ತು. ಬಿಗ್​ಬಿ ಅವತಾರಕ್ಕೆ ಜನ ಮೆಚ್ಚುಗೆ ಸೂಚಿಸಿದ್ದರು. ಇದರ ಜೊತೆಗೆ ನಿರ್ದೇಶಕ ಎಸ್.ಜೆ. ಸೂರ್ಯ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...