ಸಾರ್ವತ್ರಿಕ ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಅಧಿಕಾರಕ್ಕೇರುವ ಆಸೆಯಲ್ಲಿರುವ ಬಿಜೆಪಿಗೆ ಆತಂಕದ ಸುದ್ದಿಯನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರೆಡ್ಡಿ ನೀಡಿದ್ದಾರೆ. ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣವಿದ್ದು, ಶಾಸಕ ಉಮೇಶ ಕತ್ತಿ ಸೇರಿದಂತೆ ಕೆಲವು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಉಮೇಶ್ ಕತ್ತಿ ಸೇರಿದಂತೆ 5 – 6 ಮಂದಿ ಶಾಸಕರು ಬಿಜೆಪಿಯನ್ನು ತ್ಯಜಿಸಲಿದ್ದಾರೆ. ಬಿಜೆಪಿ ತೊರೆಯುವ ಶಾಸಕರೆಲ್ಲರೂ ಜೆಡಿಎಸ್ ಗೆ ಬರುತ್ತಾರೆ ಎಂದು ನಾನು ಹೇಳಲಾರೆ. ಆದರೆ, ಬಿಜೆಪಿಯ 5 – 6 ಮಂದಿ ಶಾಸಕರು ಪಕ್ಷದಲ್ಲಿ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.