ಉತ್ತರಪ್ರದೇಶದ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವಿದರ ಜೊತೆಗೆ ರಾಜಸ್ಥಾನ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಮಾಡುವತ್ತ ಬಿಜೆಪಿ ಸಾಗಿದೆ.
ಜೊತೆಗೆ ಪಶ್ಚಿಮ ಬಂಗಾಳ, ಒಡಿಶಾದಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಮುಖ್ಯವಾಗಿ ತೆಲಂಗಾಣದಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ತೋರಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ಖಾತೆ ಇನ್ನೂ ಓಪನ್ ಆಗಿಲ್ಲ. ಮಧ್ಯಾಹ್ನದ ವೇಳೆಗೆ 542 ಸ್ಥಾನಗಳ ಪೈಕಿ ಬಿಜೆಪಿ+ 349; ಕಾಂಗ್ರೆಸ್ + : 93, ಇತರೆ 100 ಇದೆ.
ಎಲ್ಲಿ ನೋಡಿದರೂ ಬಿಜೆಪಿ ಹವಾ..! ಸಾಬೀತಾಯ್ತು ಮೋದಿ ಸುನಾಮಿ..?
Date: