ಎಲ್ಲೆಲ್ಲೂ ಹಕ್ಕಿಜ್ವರ ; ಚಿಕನ್ ತಿನ್ನಬಹುದಾ ತಿನ್ನಬಾರದ? ಆರೋಗ್ಯ ಸಂಸ್ಥೆ ಕೊಟ್ಟ ಉತ್ತರ ಇಲ್ಲಿದೆ ನೋಡಿ

0
58

ಎಲ್ಲೆಡೆ ಕರೋನವೈರಸ್ ತನ್ನ ಅಬ್ಬರವನ್ನು ಮುಂದುವರಿಸಿದ್ದರೆ, ಅದರ ಜೊತೆಗೆ ಇದೀಗ ಹಕ್ಕಿಜ್ವರ ಕೂಡ ಸೇರಿಕೊಂಡಿದೆ. ಹೌದು ರಾಜಸ್ಥಾನ ಮಧ್ಯಪ್ರದೇಶ ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಕ್ಕಿಜ್ವರ ಬಂದ ನಂತರ ಕೋಳಿ ಫಾರಂಗಳಿಗೆ ಬೀಗ ಬೀಳುತ್ತಿದೆ.

 

ಇನ್ನು ಬೇರೆ ರಾಜ್ಯಗಳಲ್ಲಿಯೂ ಸಹ ಹಕ್ಕಿ ಜ್ವರಕ್ಕೆ ಹೆದರಿ ಜನ ಚಿಕನ್ ತಿನ್ನುವುದನ್ನು ನಿಲ್ಲಿಸುತ್ತಿದ್ದಾರೆ. ಇನ್ನು ಹಲವಾರು ಮಂದಿ ಹಕ್ಕಿಜ್ವರದ ಕುರಿತು ಗೊಂದಲವನ್ನು ಎದುರಿಸುತ್ತಿದ್ದಾರೆ. ಈ ವೇಳೆಯಲ್ಲಿ ಕೋಳಿಯನ್ನು ತಿನ್ನಬಹುದಾ ತಿಂದರೆ ಏನಾಗಲಿದೆ ಎಂಬ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ. ಇದೀಗ ಈ ಪ್ರಶ್ನೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಉತ್ತರವನ್ನು ನೀಡಿದೆ.

 

ಹಕ್ಕಿಜ್ವರ ಅಂದರೆ H5N1 ವೈರಸ್, ಈ ವೈರಸ್ ತಗುಲಿದ ಕೋಳಿಯನ್ನು ತಿಂದರೆ ಮನುಷ್ಯ ನಲ್ಲಿಯೂ ಸಹ ವೈರಸ್ ಹಬ್ಬುವುದು ಪಕ್ಕ. ಇನ್ನು ಕೋಳಿಯನ್ನು ಚೆನ್ನಾಗಿ ಬೇಯಿಸಿ, ಅಂದರೆ 74°C ಉಷ್ಣಾಂಶದಲ್ಲಿ ಬೇಯಿಸಿದ ನಂತರ ಸೇವಿಸಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ. ಒಂದು ವೇಳೆ ಆ ಕೋಳಿಯಲ್ಲಿ ವೈರಸ್ ಇದ್ದರೂ ಸಹ ಇಷ್ಟು ಪ್ರಮಾಣದಲ್ಲಿ ಮಾಂಸವನ್ನು ಬೇಯಿಸುವುದರಿಂದ ವೈರಸ್ ಮನುಷ್ಯನಲ್ಲಿ ಹರಡುವುದಿಲ್ಲ. ಇನ್ನು ಕೋಳಿ ಮೊಟ್ಟೆಯನ್ನು ಸಹ ಚೆನ್ನಾಗಿ ಬೇಯಿಸಿದ ನಂತರ ಸೇವಿಸುವುದು ಉತ್ತಮ.

 

ಒಟ್ಟಿನಲ್ಲಿ ಸದ್ಯಕ್ಕೆ ಚಿಕನ್ ಪ್ರಿಯರು ಚಿಕನ್ ನಿಂದ ದೂರ ಇರುವುದೇ ಉತ್ತಮ..

LEAVE A REPLY

Please enter your comment!
Please enter your name here