ಮೊಬೈಲ್ ಹ್ಯಾಕ್ ಆಗಿದೆಯೇ ಎಂಬುದನ್ನು ತಿಳಿಯುವುದು ಹೇಗೆ?

0
43

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದೆ . ಕಡಿಮೆ ದರ, ಸುಲಭ ಲಭ್ಯತೆ ಆಂಡ್ರಾಯ್ಡ್ ಫೋನ್ ಗಳು ಹೆಚ್ಚು ಜನಪ್ರಿಯವಾಗಿವೆ. ಅಲ್ಲದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವಿವಿಧ ಆ್ಯಪ್‌ಗಳನ್ನು ಕೂಡ ಸುಲಭದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಲ್ಲದ ಆ್ಯಪ್‌ಗಳನ್ನು ಕೂಡ ಇನ್‌ಸ್ಟಾಲ್ ಮಾಡಲು ಆಂಡ್ರಾಯ್ಡ್‌ ಫೋನ್‌ನಲ್ಲಿ ಅವಕಾಶವಿದೆ. ಹೀಗಿರುವಾಗ ಅದರ ಸುಲಭ ಸಾಫ್ಟ್‌ವೇರ್ ಮತ್ತು ಅದರಲ್ಲಿನ ಕೆಲವೊಂದು ಲೋಪದೋಷಗಳನ್ನು ಹ್ಯಾಕರ್‌ಗಳು ಸುಲಭದಲ್ಲಿ ಬಳಸಿಕೊಳ್ಳುತ್ತಾರೆ. ಅದರಿಂದಾಗಿ ಮೊಬೈಲ್‌ಗೆ ವೈರಸ್, ಮಾಲ್ವೇರ್, ಸ್ಪೈ ಆ್ಯಪ್‌, ಅಪಾಯಕಾರಿ ಆ್ಯಪ್‌ಗಳು ದಾಳಿ ಇಡುತ್ತವೆ. ಹೀಗಾಗಿ ನಿಮ್ಮ ಫೋನ್‌ಗೂ ವೈರಸ್ ದಾಳಿಯಾಗಿದ್ದರೆ ಅದನ್ನು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಆ ಬಗ್ಗೆ ಮಾಹಿತಿ.

* ನೀವು ಇಂಟರ್‌ನೆಟ್ ಬಳಸುತ್ತಿದ್ದು, ನಿಮ್ಮ ಗಮನಕ್ಕೆ ಬಾರದೆಯೇ ಅಲ್ಲಿ ಹೆಚ್ಚಿನ ಡೇಟಾ ಬಳಕೆಯಾಗುತ್ತಿದ್ದರೆ ನಿಮ್ಮ ಅರಿವಿಗೆ ಬಾರದೆಯೇ ಅಲ್ಲಿರುವ ಆ್ಯಪ್‌ ಹೆಚ್ಚಿನ ಡೇಟಾ ಬಳಕೆ ಮಾಡುತ್ತಿದೆ ಎಂದರ್ಥ. ಜತೆಗೆ ನಿಮ್ಮ ಫೋನ್‌ನಿಂದ ಮಾಹಿತಿ ಕಳವಾಗುತ್ತಿರಬಹುದು.

*ನಿಮ್ಮ ಫೋನ್‌ನಲ್ಲಿ ಇದ್ದಕ್ಕಿಂದಂತೆ ವಿವಿಧ ಸ್ವರೂಪದ ಜಾಹೀರಾತು ಕಾಣಿಸಿಕೊಳ್ಳಬಹುದು. ನಿಮಗೆ ಸಂಬಂಧವೇ ಇಲ್ಲದ ಜಾಹೀರಾತು ಏಕಾಏಕಿ ಕಾಣಿಸಿಕೊಂಡು ಮರೆಯಾಗಬಹುದು. ಜತೆಗೆ ಸಾಧಾರಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅವು ಇರುತ್ತವೆ. ಹೀಗಾಗಿದ್ದಲ್ಲಿ ನಿಮ್ಮ‌ ಫೋನ್ ಹ್ಯಾಕ್ ಆಗಿರಬಹುದು…

* ನಿಮ್ಮ ಗಮನಕ್ಕೆ ಬರದೇ, ನಿಮ್ಮ ಅರಿವಿಲ್ಲದೆ ನಿಮ್ಮ ಫೋನ್‌ನಲ್ಲಿ ಅಪರಿಚಿತ ಆ್ಯಪ್‌ ಇನ್‌ಸ್ಟಾಲ್ ಆಗಬಹುದು. ನೀವು ಇನ್‌ಸ್ಟಾಲ್ ಮಾಡಿಲ್ಲವೆಂದಾದರೂ, ಅದಾಗಿಯೇ ಇನ್‌ಸ್ಟಾಲ್ ಆಗಿರುವ ಸಾಧ್ಯತೆಯಿರುತ್ತದೆ ..ಹೀಗಾಗಿದ್ದಲ್ಲಿ ನಿಮ್ಮ ಫೋನ್ ಹ್ಯಾಕ್ ಆಗಿದೆ!

ನಿಮ್ಮ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿರಬಹುದು. ಹೆಸರು ಅಥವಾ ನಂಬರ್ ಕಾಣಿಸದೇ ಇರಬಹುದು. ಇಂಟರ್‌ನೆಟ್ ಕಾಲ್, ಇಂಟರ್‌ನ್ಯಾಶನಲ್ ಕಾಲ್ ಕೂಡ ಬಂದಿರುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಮಗೆ ಬರುವ ಕರೆಗಳ ಕುರಿತು ನಿಗಾ ವಹಿಸಿ.

 

ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಆ್ಯಪ್‌ ಐಕಾನ್ ಮರೆಯಾಗಿದ್ದರೆ, ಇಲ್ಲವೇ ನೀವು ಹೊಸದಾಗಿ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ ಕೂಡ ಹೋಮ್‌ಸ್ಕ್ರೀನ್ ಐಕಾನ್ ಕಾಣೆಯಾಗಿರಬಹುದು. ಡೌನ್‌ಲೋಡ್ ಪಟ್ಟಿಯಲ್ಲಿ ಆ್ಯಪ್‌ ಕಾಣಿಸದೇ ಇದ್ದರೆ ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದೇ ಅರ್ಥ.

ನಿಮ್ಮ ಫೋನ್‌ ಸಾಧಾರಣ ಬಳಕೆಯಲ್ಲಿ ಇರುವ ಅವಧಿಗಿಂತ ಇತರ ಸಮಯದಲ್ಲಿ ಒಮ್ಮೆಲೆ ಬ್ಯಾಟರಿ ಖಾಲಿಯಾಗಬಹುದು. ಅಥವಾ ಏಕಾಏಕಿ ಪೂರ್ತಿ ಇದ್ದ ಚಾರ್ಜ್ ಕಡಿಮೆಯಾಗಬಹುದು. ಇದು ನಿಮ್ಮ ಫೋನ್‌ನಲ್ಲಿ ನಿಮಗರಿವಿಲ್ಲದೆಯೇ ಬ್ಯಾಟರಿ ಬಳಕೆಯಾಗುತ್ತಿರುವ ಸೂಚನೆ ಆಗಿರುತ್ತವೆ!


ಫ್ರೆಂಚ್ ಭೌತಜ್ಞಾನಿ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾಸ್ಟ್ರಾಡಾಮಸ್ ಬರೆದಿದ್ದ ಲೆಸ್ ಪ್ರೊಫೆಟಿಸ್‌ನಲ್ಲಿ ಜಗತ್ತಿನಲ್ಲಿ ಮುಂದೆ ಏನಾಗಲಿದೆ, ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಮೊದಲೇ ಅಂದಾಜಿಸಿದ್ದ. ಆತನ ಅಂದಾಜಿನಂತೆ ಮತ್ತು ಪುಸ್ತಕದಲ್ಲಿ ಹೇಳಿದ್ದಂತೆ ಈವರೆಗೆ ಹಲವು ಅಚ್ಚರಿಗಳು ಸಂಭವಿಸಿದ್ದು, ಜನರನ್ನು ಬೆರಗುಗೊಳಿಸಿವೆ. ನಾಸ್ಟ್ರಾಡಾಮಸ್ ಮರಣದ ಬಳಿಕ ಆತನ ಪುಸ್ತಕ ಪ್ರಸಿದ್ಧಿ ಪಡೆಯಿತು. ಹೀಗಿರುವಾಗ ನಾಸ್ಟ್ರಾಡಾಮಸ್ ಅಂದಾಜಿಸಿದಂತೆ 2020ರಲ್ಲಿ ಏನೇನು ನಡೆಯಲಿದೆ?. ನಿನ್ನೆಗಷ್ಟೆ ದೊಡ್ಡ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ನಮ್ಮಲ್ಲಿತ್ತು. ಆದರೆ, ನಾಸ್ಟ್ರಾಡಾಮಸ್ ಪ್ರಕಾರ 2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಕೂಡ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯ ಬಹುತೇಕ ನಿಜವಾಗಿವೆಯಂತೆ. ಲೆಸ್ ಪ್ರೊಫೇಟಿಸ್ ಎಂಬ ಪುಸ್ತಕವನ್ನು ಬರೆದಿರುವ ನಾಸ್ಟ್ರಾಡಾಮಸ್, ಅದರಲ್ಲಿ ಈ ಅಂದಾಜುಗಳನ್ನು ಮಾಡಿದ್ದಾನಂತೆ. ಐದು ಶತಮಾನಗಳ ಹಿಂದೆ ಈ ಪುಸ್ತಕ ಬರೆಯಲಾಗಿದೆಯಾದರೂ ಸಹ ಇಂದಿಗೂ ಇದು ಪ್ರಸ್ತುತವಾಗಿದೆ.
ಈತನ ಅನೇಕ ಭವಿಷ್ಯ ನಿಜವಾಗಿರುವ ಕಾರಣ ಇದೀಗ ಆತನ ಪುಸ್ತಕಗಳನ್ನು ಓದುವ ಮಂದಿ 2021 ರ ಬಗ್ಗೆಯೂ ಈತ ಹೇಳಿರುವುದು ನಿಜವಾಗುವುದೆಂಬ ಭಯದಲ್ಲಿ ಇದ್ದಾರೆ. ಈ ವರ್ಷ ಕೆಲ ಯುವಕರು ಅರ್ಧ ಸತ್ತಿದ್ದು, ಅವುಗಳ ಪ್ರೇತಾತ್ಮಗಳೆಲ್ಲಾ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ ಎಂದಿದ್ದಾರೆ.
ಇದೇ ವೇಳೆ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆಲ್ಲಾ ನಾಶ ಮಾಡಬಲ್ಲದು. ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಈ ಪುಸ್ತಕದಲ್ಲಿ ಬರೆದಿದ್ದಾರೆ.
ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿರುವ ಮಾತುಗಳನ್ನು ಅಮೆರಿಕದ ನಾಸಾದ ಮುನ್ಸೂಚನೆ ಸಹ ಸ್ಪಷ್ಟಪಡಿಸುತ್ತಿದೆ. ಇವೆಲ್ಲಾ ಸಾಕಾಗದೇ ಇದ್ದಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಬಗೆಗೂ ಪುಸ್ತಕದಲ್ಲಿ ಉಲ್ಲೇಖವಿದೆ.
ಇದೇ ವೇಳೆ ಸಾಂಕ್ರಮಿಕಗಳು, ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪದಿಂದ ಜನರ ತತ್ತರಿಸುವುದರೊಂದಿಗೆ ಈ ವರ್ಷಗಳಲ್ಲಿ ಕೊರೋನಾಗಿಂತಲೂ ಇನ್ನೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುತ್ತದೆ ಈ ಬುಕ್.
ಸುಮಾರು 465 ವರ್ಷಗಳ ಹಿಂದೆ ಮೈಕಲ್ ದಿ ನಾಸ್ಟ್ರಾಡಾಮಸ್  ಪ್ರಪಂಚದ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ (Prophecies of Nostradamus) ಎಂಬ ತನ್ನ ಪುಸ್ತಕದಲ್ಲಿ, ನಾಸ್ಟ್ರಾಡಾಮಸ್ ಒಟ್ಟು 6338 ಭವಿಷ್ಯವಾಣಿಗಳನ್ನುಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ. 70 ರಷ್ಟು  ನಿಜವೆಂದು ಸಾಬೀತಾಗಿವೆ.

LEAVE A REPLY

Please enter your comment!
Please enter your name here