ಎಲ್ಲೋಯ್ತು ಸ್ವಾಮಿ 200 ರೂಪಾಯಿ ಮೇಲೆ ಮಲ್ಟಿಪ್ಲೆಕ್ಸ್ ಟಿಕೆಟ್ ಮಾರುವಂತಿಲ್ಲ ಎನ್ನುವ ರೂಲ್ಸ್..?!

Date:

ನಿಮಗೆಲ್ಲಾ ನೆನಪಿರಬಹುದು ಈ ಹಿಂದೆ 2017 ರಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಸಹ ಮಾರಾಟವಾಗುವ ಟಿಕೆಟ್ ದರಕ್ಕೆ ಕ್ಯಾಪ್ ಹಾಕಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಹೌದು ಕರ್ನಾಟಕದಲ್ಲಿರುವ ಪ್ರತಿಯೊಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಯಾವುದೇ ಕಾರಣಕ್ಕೂ 200 ರುಪಾಯಿಗಿಂತ ಹೆಚ್ಚು ಹಣವನ್ನು ಟಿಕೆಟ್ ಕ್ಕೆ ವಿಧಿಸಬಾರದು ಎಂಬ ರೂಲ್ಸ್ ಜಾರಿಗೆ ಬಂದಿತ್ತು. ಈ ಸುದ್ದಿ ಕೇಳಿದ ಸಿನಿ ಪ್ರೇಕ್ಷಕರು ಎಷ್ಟು ಸಂಭ್ರಮ ಪಟ್ಟ ರೆಂದರೆ ಅಬ್ಬಾ ಕೊನೆಗೂ ಮಲ್ಟಿಪ್ಲೆಕ್ಸ್ಗಳ ಸುಲಿಗೆಯಿಂದ ಬಚಾವ್ ಆದೆವು ಎಂಬ ನಿಟ್ಟುಸಿರನ್ನು ಬಿಟ್ಟಿದ್ದರು.


ಆದರೆ ಇಂದು ಆಗಿರುವುದು ಏನು ಎಲ್ಲಿ ಹೋಯಿತು ಆ ರೂಲ್ಸ್ ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಮತ್ತೆ ಮತ್ತೆ ಕಾಡುತ್ತಲೇ ಇದೆ. ಸ್ಟಾರ್ ನಟರ ಚಿತ್ರ ಬಿಡುಗಡೆ ಆದರೆ ಸಾಕು ಒಂದು ಟಿಕೇಟ್ನ ಪ್ರೈಸ್ ಮಲ್ಟಿಪ್ಲೆಕ್ಸ್ ಗಳಲ್ಲಿ 300 ರಿಂದ 800 ರ ತನಕವೂ ಸಹ ಇರುತ್ತವೆ. ನೀವೆಲ್ಲ ಗಮನಿಸಿರಬಹುದು ಭಾರತದ ಯಾವುದೇ ಸ್ಟಾರ್ ನಟರ ಚಿತ್ರ ಬಿಡುಗಡೆ ಆದರೆ ಸಾಕು ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ರೇಟ್ ಆರಂಭವಾಗುವುದೇ 236 ರೂಪಾಯಿಗಳಿಂದ…!! ಪಕ್ಕದ ತಮಿಳುನಾಡಿನಲ್ಲಿ 130 ಗರಿಷ್ಠ ಮಲ್ಟಿಪ್ಲೆಕ್ಸ್ ಟಿಕೆಟ್ ದರ.

ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಹೊಸ ರೀತಿಯ ರೂಲ್ಸ್ ಜಾರಿಗೆ ಬಂದರೂ ಸಹ ಅದನ್ನು ಪ್ರತಿಯೊಂದು ಮಲ್ಟಿಪ್ಲೆಕ್ಸ್ ಗಳು ಸಹ ಮುರಿದುಕೊಂಡು ತಮ್ಮ ಟಿಕೆಟ್ ದರದ ಪದ್ಧತಿಯನ್ನೇ ಇಂದೂ ಸಹ ಮುಂದುವರೆಸುತ್ತಿವೆ. ಅಂದು ಟಿಕೆಟ್ ದರದ ಮೇಲೆ ನಿಯಂತ್ರಣ ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಪ್ರೇಕ್ಷಕರು ಇಂದು ಸಹ ಅದೇ ರೀತಿಯ ಕನಸನ್ನು ಕಾಣುತ್ತಿದ್ದಾರೆ. ಇನ್ನು ಇದಿಷ್ಟು ಟಿಕೆಟ್ ದರದ ಕುರಿತಾದ ಮಧ್ಯಂತರದಲ್ಲಿ ಮಾರಾಟವಾಗುವ ತಿಂಡಿ ತಿನಿಸು & ತಂಪು ಪಾನೀಯಗಳ ದರದ ಬಗ್ಗೆ ಮಾತನಾಡಲು ಬಾಯೇ ಬರಲ್ಲ ಬಿಡಿ…

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...