ಎಷ್ಟೇ ನೀಟ್ ಮಾಡಿದ್ರೂ ಅಡುಗೆಮನೆ ಟೈಲ್ಸ್ ಕೊಳೆ ಹೋಗ್ತಿಲ್ವಾ!?, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

Date:

 

ಅಡುಗೆ ಮನೆಯ ಗೋಡೆಯ ಟೈಲ್ಸ್ ಹೆಚ್ಚು ಕೊಳೆ ಆಗೋದು ಕಾಮನ್. ಹೀಗಾಗಿ ಗೋಡೆಗೆ ಟೈಲ್ಸ್ ಹಾಳಾಗಬಾರದು ಎಂದರೆ ನೀವು ಅದನ್ನು ಆಗಾಗ ಕ್ಲೀನ್ ಮಾಡುತ್ತಾ ಇರಬೇಕು. ಆದರೆ ಯಾವ ರೀತಿ ಕ್ಲೀನ್ ಮಾಡಿದರು ಅದು ಸ್ವಚ್ಛವಾಗುತ್ತಿಲ್ಲ ಎಂದು ನಿಮಗೆ ಅನಿಸಿದರೆ, ನಾವು ಇಲ್ಲಿ ನೀಡಿದ ಕೆಲವು ಟಿಪ್ಸ್‌ಗಳನ್ನು ನೀಡಿದ್ದೇವೆ ಟ್ರೈ ಮಾಡಿ ನೋಡಿ. ಇವುಗಳು ನಿಮಗೆ ಖಂಡಿತ ಪ್ರಯೋಜನಕ್ಕೆ ಬರುತ್ತವೆ. ಸಾಮಾನ್ಯವಾಗಿ ಟೈಲ್ಸ್‌ಗಳು ಹುಳಿ ಪದಾರ್ಥಗಳು ತಾಗಿದಾಗ ಕ್ಲೀನ್ ಆಗುತ್ತದೆ. ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ನೀವು ಟೈಲ್ಸ್ ಗಳನ್ನು ಸ್ವಚ್ಛ ಮಾಡಬಹುದು. ಬೇಕಿಂಗ್ ಸೋಡಾ ಮತ್ತು ನೀರನ್ನು ಮಿಕ್ಸ್ ಮಾಡಿ ಅದನ್ನು ಸ್ಕ್ರಬ್ಬರ್ ನಿಂದ ಗೋಡೆಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಡಿ. ಅದಾದ ನಂತರ ಮತ್ತೊಮ್ಮೆ ಸ್ಕ್ರಬ್ ಮಾಡಿ. ಈಗ ತೊಳೆಯಿರಿ. ಗೋಡೆ ಮೇಲಿನ ಕಲೆಗಳು ಮಾಯವಾಗುತ್ತದೆ.

ಪಾತ್ರೆ ತೊಳೆಯುವ ಸೋಪ್
ನೀವು ಪಾತ್ರೆ ತೊಳೆಯುವ ಸೋಪನ್ನು ಸ್ಕ್ರಬ್ಬರ್ ಗೆ ಹಾಕಿ ನಂತರ ಅದೇ ಸ್ಕ್ರಬ್ಬರ್ ನಲ್ಲಿ ಗೋಡೆಗಳನ್ನು ಉಚ್ಚಿ. ಉಚ್ಚಿದ ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ಎಲ್ಲವನ್ನು ಒರೆಸಿ. ನಂತರ ನೀರು ಹಾಕಿ ತೊಳೆಯಿರಿ. ಇಷ್ಟು ಮಾಡಿದರೂ ಟೈಲ್ಸ್‌ ಕ್ಲೀನ್ ಆಗುತ್ತದೆ. ಆದರೆ ನೀವು ನಿಮ್ಮ ಕೈ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ಪರಿಮಳದಾಯಕ ಸೋಪ್ ಬಳಸಿ ಕೈ ತೊಳೆದುಕೊಳ್ಳಿ

ತುಂಬಾ ಉಜ್ಜಬೇಡಿ
ಯಾವಾಗಲೂ ತುಂಬಾ ಉಜ್ಜಿದರೆ ಗ್ಲೇಜ್ ಹಾಳಾಗುತ್ತದೆ. ನಂತರ ಅದು ಎಷ್ಟೇ ಸ್ವಚ್ಛವಾದರೂ ಚಂದ ಕಾಣುವುದಿಲ್ಲ. ನೀವು ಎಷ್ಟೋ ದಿನಗಳ ನಂತರ ಇದನ್ನು ಕ್ಲೀನ್ ಮಾಡಿದರೆ ಹಳೆ ಕಲೆಗಳು ಹಾಗೆ ಗಟ್ಟಿಯಾಗಿ ಉಳಿದುಕೊಂಡು ಬಿಡುತ್ತವೆ. ಆ ಕಾರಣಕ್ಕಾಗಿ ನೀವು ತಿಂಗಳಿಗೆ ಒಮ್ಮೆಯಾದರೂ ನಿಮ್ಮ ಮನೆಯ ಕಿಚನ್ ಟೈಲ್ಸ್ ಕ್ಲೀನ್ ಮಾಡಲೇಬೇಕು.

ಲಿಂಬು ಬಳಸಿ
ಆಗಲೇ ತಿಳಿಸಿದಂತೆ ಹುಳಿ ಅಂಶ ಇದ್ದಲ್ಲಿ ಟೈಲ್ಸ್‌ ಬೇಗ ಕ್ಲೀನ್ ಆಗುತ್ತದೆ. ಆ ಕಾರಣದಿಂದ ನೀವು ಬಳಸಿದ ಲಿಂಬು ಸಿಪ್ಪೆ ಇದ್ದರೆ ಅದನ್ನು ಉಪ್ಪಿನಲ್ಲಿ ನೆನೆಸಿಟ್ಟು ನಂತರ ಅದನ್ನು ನೀವು ಟೈಲ್ಸ್‌ಗೆ ಹಾಕಿ ಸ್ವಚ್ಛ ಮಾಡಿ. ಹೀಗೆ ಮಾಡುವುದರಿಂದಲೂ ಕ್ಲೀನ್ ಆಗುತ್ತದೆ. ಇನ್ನು ಹುಳಿಯಾದ ಮಜ್ಜಿಗೆ ಇದ್ದರೆ ಅದನ್ನೂ ಉಪಯೋಗಿಸಬಹುದು. ಇದು ಕೂಡ ಉತ್ತಮ ರಿಸಲ್ಟ್ ಕೊಡುತ್ತದೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...