ಎಸ್ಎಸ್ ಎಲ್ ಸಿ‌ ಫಲಿತಾಂಶ ಪ್ರಕಟ.. ಚಿಕ್ಕಬಳ್ಳಾಪುರಕ್ಕೆ‌ ಮೊದಲ ಸ್ಥಾನ..

0
110

2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶೇಕಡವಾರು 71.80 ಫಲಿತಾಂಶ ಬಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಈ ಬಗ್ಗೆ ‌ಶಿಕ್ಷಣ ಸಚಿವ ‌ಸುರೇಶ್ ಕುಮಾರ್ ‌ಸುದ್ದಿಗೋಷ್ಠಿ ನಡೆಸಿದ್ದು, ವಿದ್ಯಾರ್ಥಿಗಳ ಮೊಬೈಲ್ ಗೆ ಎಸ್ ಎಂಎಸ್ ಮೂಲಕ‌ ಫಲಿತಾಂಶ ಕಳುಹಿಸಲಾಗಿದ್ದು, ನಾಳೆ ಶಾಲೆಗಳಲ್ಲಿ ‌ಪ್ರಕಟವಾಗಲಿದೆ. www.karresult.nic.in ವೆಬ್ ಸೈಟ್ ನಲ್ಲೂ ಫಲಿತಾಂಶ ಪ್ರಕಟವಾಗಿದ್ದು, ಮಕ್ಕಳು ಮನೆಯಲ್ಲೇ ಕುಳಿತು ನೋಡಿಕೊಳ್ಳಬೇಕು ಎಂದರು.

8.48.203 ವಿದ್ಯಾರ್ಥಿಗಳು ಪರೀಕ್ಷೆ ಅಣಿಮಾಡಲಾಗಿತ್ತು. ಅದರಲ್ಲಿ 8,11,050 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಕೊರೋನಾ ಕಾರಣದಿಂದ 18,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. 19,086 ಶಾಲಾ ಮಟ್ಟದಲ್ಲಿಯೇ ಅವರ ಹೆಸರುಗಳನ್ನು ತೆಗೆದು ಹಾಕಲಾಗಿತ್ತು.

ಕೊರೊನಾ ಆತಂಕದ ನಡುವೆಯು ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82,314 ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನೂ ,2,28,734 ವಿದ್ಯಾರ್ಥಿಗಳು ‌ಅನುತ್ತೀರ್ಣರಾಗಿದ್ದಾರೆ. ‌625ಕ್ಕೆ 625 ಅಂಕ ಪಡೆದ ಆರು ಮಕ್ಕಳು ರಾಜ್ಯಕ್ಕೆ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಹನ್ನೊಂದು ವಿದ್ಯಾರ್ಥಿಗಳು ‌624 ಅಂಕ ಪಡೆದಿದ್ದಾರೆ. 45 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. 117 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ. ಕಳೆದ ಬಾರಿ ಇಬ್ಬರೂ ಮಾತ್ರ 625 ಅಂಕ ಪಡೆದು ಟಾಪರ್ ಗಳಾಗಿದ್ದರು. ಕಳೆದ ವರ್ಷ ಶೇ.73.70 ಫಲಿತಾಂಶ ‌ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ‌ಈ ಬಾರಿ 1.9ರಷ್ಟು ಫಲಿತಾಂಶ ಕಡಿಮೆ‌ ಬಂದಿದೆ.

ಇನ್ನೂ ಈ ಬಾರಿ ಚಿಕ್ಕಬಳ್ಳಾಪುರ
ಜಿಲ್ಲೆ‌ ಪ್ರಥಮ‌ ಸ್ಥಾನ ಲಭಿಸಿದ್ದು, ಬೆಂಗಳೂರು ‌ಗ್ರಾಮಾಂತರ ದ್ವಿತೀಯ ಸ್ಥಾನ‌ ಪಡೆದಿದೆ. ಮೂರನೇ‌ ಸ್ಥಾನದಲ್ಲಿ ಮಧುಗಿರಿ, ನಾಲ್ಕನೇ ಸ್ಥಾನದಲ್ಲಿ ಮಂಡ್ಯ ಇದೆ. ಯಾದಗಿರಿ ಕೊನೆ ಸ್ಥಾನ ಲಭಿಸಿದೆ. ಈ ಬಾರಿ ಚಿಕ್ಕೋಡಿ 30ನೇ ಸ್ಥಾನದಲ್ಲಿದೆ. ಬೆಳಗಾವಿ 31 ನೇ ಸ್ಥಾನಕ್ಕೆ ಕುಸಿದಿದೆ. ಉಡುಪಿ 7 ನೇ ಸ್ಥಾನ, ಮಂಗಳೂರು 12 ನೇ ಸ್ಥಾನ, ಶಿರಸಿ 15 ನೇ ಸ್ಥಾನದಲ್ಲಿದೆ ಎಂದರು.

ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು‌ ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ.70.60ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಅನುದಾನಿತ ರಹಿತ ಶಾಲೆಗಳ ಶೇ.83.12 ಮಂದಿ ಪಾಸ್ ಆಗಿದ್ದಾರೆ.

ಪ್ರತಿಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.77.74 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ‌. ಇನ್ನೂ, 66.41 ಬಾಲಕರು ಉತ್ತೀರ್ಣರಾಗಿದ್ದಾರೆ.

ಇನ್ನು ನಗರ ಪ್ರದೇಶದಲ್ಲಿ ‌ಶೇ.41ರಷ್ಟು ಮಂದಿ ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ‌ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ‌.ಈ ಬಾರಿ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ. 70.49 ಇಂಗ್ಲಿಷ್ ಮಾಧ್ಯಮದಲ್ಲಿ ಶೇ. 84.98 ಫಕಲಿತಾಂಶ ಬಂದಿದೆ.

ಒಟ್ಟು 1,550 ಶಾಲೆಗಳು ಶೇ 100ರ ಫಲಿತಾಂಶ ಪಡೆದಿವೆ. ಕಳೆದ ವರ್ಷ 1626 ಶಾಲೆಗಳು ಶೇ 100ರ ಫಲಿತಾಂಶ ಪಡೆದಿದ್ದವು. 501 ಸರ್ಕಾರಿ ಶಾಲೆಗಳು- 501, 139 ಅನುದಾನಿತ, 910 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಅಂಕ ಬಂದಿದೆ. 

ಈ ಬಾರಿ ಒಟ್ಟು 62 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 46 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಈ ಬಾರಿ ಸರ್ಕಾರಿ ಶಾಲೆಗಳು – 4, ಅನುದಾನಿತ – 11 ಮತ್ತು ಅನುದಾನ ರಹಿತ – 47 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ  ಎಂದು ಸುರೇಶ್ ಕುುಮಾರ್ ಮಾಹಿತಿ ನೀಡಿದರು.

 

 

LEAVE A REPLY

Please enter your comment!
Please enter your name here