ಐರ್ಲೆಂಡ್ ರ Facebook ಸಿಬ್ಬಂದಿಯಿಂದ ದೆಹಲಿ ವ್ಯಕ್ತಿ ಜೀವ ಉಳೀತು..!

0
174

ಐರ್ಲೆಂಡ್ ರ Facebook ಸಿಬ್ಬಂದಿಯಿಂದ ದೆಹಲಿ ವ್ಯಕ್ತಿ ಜೀವ ಉಳೀತು..!
ನವದೆಹಲಿ : ಆತ ಆರ್ಥಿಕ ಸಮಸ್ಸೆಯಿಂದ ನೊಂದಿದ್ದ. ತನ್ನ ಜೀವನವನ್ನೇ ಕೊನೆಗೊಳಿಸಿಕೊಳ್ಳಬೇಕೆಂಬ ತಪ್ಪು ಆಲೋಚನೆಯನ್ನೂ ಕೂಡ ಮಾಡಿದ್ದ. ಆ ಬಗ್ಗೆ ಫೇಸ್ಬುಕ್ನಲ್ಲಿ ಒಂದಿಷ್ಟು ವಿಡಿಯೋಗಳನ್ನು ಹರಿಬಿಟ್ಟಿದ್ದ! ಅದನ್ನು ಐರ್ಲೆಂಡ್ ಫೇಸ್ಬುಕ್ ಸಿಬ್ಬಂದಿ ಗಮನಿಸಿದ್ದು, ಕೂಡಲೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದೆಹಲಿ ಮತ್ತು ಮುಂಬೈ ಪೊಲೀಸರು ಆ ವ್ಯಕ್ತಿಯ ಹುಡುಕಾಟ ನಡೆಸಿ, ಕಾಪಾಡಿದ್ದಾರೆ!
ಇದು ರೀಲ್ ಅಲ್ಲ ರಿಯಲ್ ಸ್ಟೋರಿ!

ಮುಂಬೈನ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದ ದೆಹಲಿ ಮೂಲದ ವ್ಯಕ್ತಿಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ. ಆದ್ದರಿಂದ ಸಾಯುವ ನಿರ್ಧಾರ ಮಾಡಿದ್ದ. ಶನಿವಾರ ಆತ ತನ್ನ ಫೇಸ್ಬುಕ್ ನಲ್ಲಿ ಅನೇಕ ಲೈವ್ ವಿಡಿಯೋಗಳನ್ನು ಮಾಡಿದ್ದ. ಐರ್ಲೆಂಡ್ನಲ್ಲಿರುವ ಫೇಸ್ಬುಕ್ ಕಚೇರಿ ಸಿಬ್ಬಂದಿ ಆ ವಿಡಿಯೋಗಳನ್ನು ನೋಡಿದ್ದಾರೆ. ಅವರಿಗೆ ಅನುಮಾನ ಬಂದಿದ್ದು, ಸಂಜೆ 7 ಗಂಟೆ ಸುಮಾರಿಗೆ ದೆಹಲಿ ಸೈಬರ್ ಪೊಲೀಸ್ ಡಿಸಿಪಿ ಅನ್ಯೇಶ್ ರಾಯ್ ಅವರನ್ನು ಸಂಪರ್ಕಿಸಿದ್ದಾರೆ. ಆ ವ್ಯಕ್ತಿಯ ಅಕೌಂಟ್ ವಿವರ, ಐಪಿ ಅಡ್ರೆಸ್ ಮತ್ತು ಅಕೌಂಟ್ನೊಂದಿಗೆ ರೆಜಿಸ್ಟರ್ ಆಗಿದ್ದ ಮೊಬೈಲ್ ನಂಬರ್ ನೀಡಿದ್ದಾರೆ.


ಆತನ ನಂಬರ್ ಟ್ರೇಸ್ ಮಾಡಿದಾಗ ಪೂರ್ವ ದೆಹಲಿ ಮಂಡಾವಳಿಯ ಮನೆಯ ಅಡ್ರೆಸ್ ಸಿಕ್ಕಿದೆ.. ರಾಯ್ ಪೂರ್ವ ವಿಭಾಗದ ಡಿಸಿಪಿ ಜಸ್ಮೀತ್ ಸಿಂಗ್ಗೆ ವಿಷಯ ತಿಳಿಸಿದ್ದಾರೆ. ಬಳಿಕ ಮಧುವಿಹಾರ್ನ ಸ್ಟೇಷನ್ ಹೌಸ್ ಆಫೀಸರ್ ಆ ವಿಳಾಸವನ್ನು ಟ್ರೇಸ್ ಮಾಡಿದ್ದಾರೆ. ಆದ್ರೆ ಮಹಿಳೆಗೆ ಮನೆಯಲ್ಲಿದ್ದ ಮಹಿಳೆಗೆ ವಿಡಿಯೋ ಕಾಲ್ ಬಗ್ಗೆ ಏನೂ ಕೂಡ ಗೊತ್ತಿರ್ಲಿಲ್ಲ. ಫೇಸ್ಬುಕ್ ಅಕೌಂಟ್ನಲ್ಲಿನ ನಂಬರ್ ನನ್ನದೇ. ಆದ್ರೆ ನನ್ನ ಗಂಡ ಅಕೌಂಟ್ ಯೂಸ್ ಮಾಡ್ತಿದ್ದಾರೆ. ಎರಡು ವಾರಗಳ ಹಿಂದೆ ನನ್ನೊಂದಿಗೆ ಜಗಳ ಆಡಿ ಮುಂಬೈಗೆ ಹೋಗಿದ್ದಾರೆ. ಅಲ್ಲಿ ಎಲ್ಲಿದ್ದಾರಂತ ಮಾತ್ರ ನಂಗೆ ಗೊತ್ತಿಲ್ಲ ಅಂದಿದ್ದಾರೆ.


ನಂತರ ಅನ್ಯೇಶ್ ರಾಯ್, ಮುಂಬೈ ಸೈಬರ್ ಡಿಸಿಪಿ ಡಾ. ರಶ್ನಿ ಕಾರಾಂಡಿಕರ್ ಅವರಿಗೆ ಕಾಲ್ ಮಾಡಿ ಘಟನೆ ವಿವರಿಸಿದ್ದಾರೆ. ವ್ಯಕ್ತಿಯ ಪತ್ನಿ ಕೊಟ್ಟ ನಂಬರ್ಗೆ ಕರೆಮಾಡಿದಾಗ ಕೆಲವೊಮ್ಮೆ ಸ್ವಿಚ್ ಆಫ್ ಅಂತ ಬರ್ತಿತ್ತು. ಕೆಲವೊಮ್ಮೆ ಕರೆಯನ್ನು ಸ್ವೀಕರಿಸ್ತಿಲ್ಲ. ಪೊಲೀಸರ ತಂಡ ಆ ನಂಬರ್ ಟ್ರೇಸ್ ಮಾಡಿದೆ. ಇನ್ಸ್ಪೆಕ್ಟರ್ ಪ್ರಮೋದ್ ಕೋಪಿಕರ್ ವ್ಯಕ್ತಿಗೆ ಸತತವಾಗಿ ಕರೆ ಮಾಡಿ ಪ್ರಯೋಜವಾಗದಿದ್ದಾಗ, ಹೆಂಡತಿ ತನ್ನ ನಂಬರ್ನಿಂದ ಕರೆ ಮಾಡುವಂತೆ ಹೇಳಿದ್ದಾರೆ. ಅಲ್ಲದೆ ವಾಟ್ಸ್ಆ್ಯಪ್ನಲ್ಲಿ ಭಾವನಾತ್ಮಕ ವಾಯ್ಸ್ ಮೆಸೇಜ್ ಹಾಗೂ ಮಕ್ಕಳ ಫೋಟೋಗಳನ್ನು ಸೆಂಡ್ ಮಾಡುವಂತೆ ತಿಳಿಸಿ, ಬ್ಲ್ಯೂಟಿಕ್ ಬಂದ ಬಳಿಕ ತಿಳಿಸಲು ಸೂಚಿಸಿದ್ದರು. ರಾತ್ರಿ 11.30ಕ್ಕೆ ಆತ ಮೆಸೇಜ್ ನೋಡಿದ್ದಾಗಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಕಾಲ್ ಮಾಡಿ ಕಾನ್ಫರೆನ್ಸ್ ಕಾಲ್ ಗೆ ಸೇರಿಸುವಂತೆ ಕೋಪಿಕ್ಕರ್ ಹೇಳಿದ್ದಾರೆ. ಅದು ಆಕೆಗೆ ಅರ್ಥವಾಗದಿದ್ದಾಗ ತಾವೇ ಕಾಲ್ ಮಾಡಿ ಆಕೆಯನ್ನು ಕಾನ್ಫರೆನ್ಸ್ಗೆ ಹಾಕಿದ್ದಾರೆ.

ಆಗ ಆತ ಕೊರೋನಾ, ಲಾಕ್ಡೌನ್ ಬಳಿಕ ತನ್ನ ಸಂಬಳ ಕಡಿಮೆ ಆಗಿರುವ ಬಗ್ಗೆ ಹಾಗೂ ಸೋಂಕು ತಗುಲುವ ಭೀತಿ ಬಗ್ಗೆ ಅಳುತ್ತಾ ಹೇಳಿದ್ದಾರೆ. ಅದಕ್ಕಾಗಿಯೇ ಸಾಯಲು ನಿರ್ಧಾರ ಮಾಡಿದ್ದೇನೆ ಎಂದಿದ್ದಾನೆ. ಅಲ್ಲದೆ ಈಗಾಗಲೇ ಎರಡು ಬಾರಿ ಆತ್ಮಹತ್ಯೆ ಯತ್ನ ಮಾಡಿರುವುದಾಗಿ ತಿಳಿಸಿದ್ದಾನೆ. ಪತ್ನಿಯ ಮನವೊಲಿಕೆಯಿಂದ ಪ್ರಯೋಜನವಾಗದಿದ್ದಾಗ ಕೋಪಿಕ್ಕರ್ ತಮ್ಮ ಹೆಂಡತಿಯಿಂದ ಕರೆ ಮಾಡಿಸಿ ಇಬ್ಬರಿಗೂ ಕೌನ್ಸೆಲಿಂಗ್ ಮಾಡಿಸಿದ್ದಾರೆ.
ಕೋಪಿಕ್ಕರ್ ಪತ್ನಿ ತಾನು ಮತ್ತು ನನ್ನ ಗಂಡ ಕೊರೋನಾ ಸೋಂಕಿನ ವಿರುದ್ಧ ಹೋರಾಡಿದ್ದೀವಿ. ಪತಿಗೆ ಸೋಂಕು ತಗುಲಿ ಗುಣಮುಖರಾಗಿದ್ದಾರೆ ಎಂದು ಸುಳ್ಳು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಬಳಿಕ ಆತ ಸಂಬಳದ ಬಗ್ಗೆ ಹೇಳಿಕೊಂಡಾಗ, ನಾವು ಕಾರೊಂದನ್ನು ವೋಲೋಗೆ ರಿಜಿಸ್ಟರ್ ಮಾಡಿದ್ದೇವೆ. ನೀನು ಅದರಲ್ಲಿ ಕೆಲಸ ಮಾಡಹುದು ಎಂದು ಕೊಪ್ಪಿಕರ್ ಭರವಸೆ ನೀಡಿದ್ದಾರೆ. ಮುಂಬೈ ಪೊಲೀಸರು ನಿನ್ನೊಂದಿಗೆ ಇರ್ತಾರೆ ಎಂದು ಧೈರ್ಯ ತುಂಬಿದ್ದಾರೆ. ಅತ್ತ ವಿಳಾಸ ಟ್ರೇಸ್ ಮಾಡುತ್ತಿದ್ದ ಪೊಲೀಸರ ತಂಡ ಬೆಳಗ್ಗೆ 3 ಗಂಟೆಗೆ ವ್ಯಕ್ತಿಯ ಮನೆ ಪತ್ತೆ ಮಾಡಿ, ಆತನ ಮನವೊಲಿಸಿ ಕಾಪಾಡಿದ್ದಾರೆ. ಐರ್ಲೆಂಡ್ ಫೇಸ್ಬುಕ್ ಸಿಬ್ಬಂದಿ ಹಾಗೂ ದೆಹಲಿ ಮತ್ತು ಮುಂಬೈ ಪೊಲೀಸರಿಂದ ವ್ಯಕ್ತಿಯ ಜೀವ ಉಳಿದಿದೆ.

LEAVE A REPLY

Please enter your comment!
Please enter your name here