ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಶೋಭಾ ಕರಂದ್ಲಾಜೆ ಒತ್ತಾಯ !?

admin
By admin
0 Min Read

ಚಿಕ್ಕಮಗಳೂರು,ಜೂ.14- ಐಎಂಎ ಜ್ಯೂವೆಲ್ಸ್ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಇಡಿಗೆ ಒಪ್ಪಿಸಬೇಕೆಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬಹುಕೋಟೆ ರೂ.ಗಳನ್ನು ವಂಚಿಸಿರುವ ಐಎಂಎ ಜ್ಯೂವೆಲ್ಸ್ ತನಿಖೆಯನ್ನು ಸಿಸಿಬಿ ಇಲ್ಲವೇ ಎಸ್‍ಐಟಿಗೆ ವಹಿಸುವ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತರಗಳು ನಡೆಯುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಐಎಂಎ ಸಂಸ್ಥೆಯಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಂ ಸಮುದಾಯದವರು ಹಣ ಹೂಡಿಕೆ ಮಾಡಿದ್ದಾರೆ. ಅವರಿಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ಇಡಿಗೆ ವಹಿಸಬೇಕು ಎಂದು ಹೇಳಿದರು.ಚುನಾಯಿತ ಪ್ರತಿನಿಧಿಗಳು ಕೂಡ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ಕೇಳಿಬರುತ್ತಿದೆ.ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐ, ಇಡಿಗೆ ವಹಿಸಬೇಕೆಂದು ಕರಂದ್ಲಾಜೆ ಆಗ್ರಹಿಸಿದರು.

Share This Article