ದೆಹಲಿಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರ ತೀರದ ಗಡಿಯಲ್ಲಿ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಮತ್ತು ಅವರ ಕುಟುಂಬ ರಜೆಯನ್ನು ಕಳೆಯಲು ಮೋಜಿಗಾಗಿ ಬಳಸಿಕೊಂಡಿತ್ತು ಎಂದು ಆರೋಪಿಸಿ ಹೇಳಿಕೆಯನ್ನು ನೀಡಿದ್ದಾರೆ.
ವಿರಾಟ್ ನೌಕೆಯನ್ನು ದೇಶದ ಸಮುದ್ರ ತೀರದ ಗಡಿಯಲ್ಲಿ ಕಾವಲು ಕಾಯಲು ನಿಯೋಜಿಸಲಾಗಿತ್ತು. ಆದರೆ ಗಡಿಯ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್ಎಸ್ ವಿರಾಟ್ ನೌಕೆಯನ್ನು ತನ್ನ ರಜೆಯ ಮೋಜಿಗಾಗಿ ಬಳಸಿಕೊಂಡಿದ್ದರು ಅಲ್ಲದೆ ಮೋಜು ಅನುಭವಿಸಲು ಬಂದಿದ್ದ ರಾಜೀವ್ ಗಾಂಧಿ ಮತ್ತು ಅವರ ಕುಟುಂಬದ ಸೇವೆಗೆಂದು ನೌಕಾಪಡೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು,
ಆ ಸಮಯದಲ್ಲಿ ಹತ್ತು ದಿನಗಳವರೆಗೂ ಐಎನ್ಎಸ್ ವಿರಾಟ್‌ಅನ್ನು ದ್ವೀಪದಲ್ಲಿಯೇ ನಿಲ್ಲಿಸಲಾಗಿತ್ತು ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿಯಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಪುನಃ ವಾಗ್ದಾಳಿಯನ್ನು ನಡೆಸಿದ್ದಾನೆ.