ಜಿ ಪರಮೇಶ್ವರ್ ಪ್ರಧಾನಿಗೆ ಐಟಿ ದಾಳಿ ನಡೆದ ನಂತರ ಅವರ ಅಂತ ಸಹಾಯಕ ರಮೇಶ್ ಕುಮಾರ್ ಅವರ ನಿವಾಸದ ಮೇಲೂ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ನಡೆದ ನಂತರ ರಮೇಶ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ರಮೇಶ್ ನಿಗೂಢ ಆತ್ಮಹತ್ಯೆಗೆ ಕಾರಣ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.
ಇದೀಗ ರಮೇಶ್ ಅವರು ಬರೆದಿರುವ ಡೆತ್ ನೋಟ್ ಸಿಕ್ಕಿದ್ದು ರಮೇಶ್ ಅವರು ಯಾಕೆ ಅತ್ಮಹತ್ಯೆ ಮಾಡಿಕೊಂಡರು ಎಂಬುದಕ್ಕೆ ನಿಖರವಾದ ಕಾರಣ ಸಿಕ್ಕಿದೆ. ಡೆತ್ ನೋಟ್ ನಲ್ಲಿ ರಮೇಶ್ ಅವರು ತಿಳಿಸುವುದೇನೆಂದರೆ ಮೊನ್ನೆ ತಮ್ಮ ಮನೆ ಮೇಲೆ ನಡೆದ ಐಟಿ ದಾಳಿಯಿಂದ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು. ಬಡವರನ್ನು ಬಡವರ ರೀತಿ ಬದುಕಲು ಬಿಡಿ ಎಂದು ಐಟಿ ಅಧಿಕಾರಿಗಳಿಗೆ ಸಾವಿನ ಪತ್ರದಲ್ಲಿ ರಮೇಶ್ ಅವರು ಬೇಡಿಕೊಂಡಿದ್ದಾರೆ , ಅಷ್ಟೇ ಅಲ್ಲದೆ ತಮ್ಮ ಹೆಂಡತಿ ಮಕ್ಕಳಲ್ಲಿ ಕ್ಷಮೆ ಕೇಳಿರುವ ರಮೇಶ್ ಅವರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಮುದ್ರದ ಮೂಲಕ ಕೇಳಿಕೊಂಡಿದ್ದಾರೆ.