ಐಪಿಎಲ್ ನಡೆದರೆ ಕೊರೊನಾ ಕಡಿಮೆಯಾಗುತ್ತೆ ಎಂದ ಆಟಗಾರ

0
61

ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿಯೇ ನಡೆದುಕೊಂಡುಬಂದಿತ್ತು. ತದನಂತರ ಐಪಿಎಲ್ ಬಯೋ-ಬಬಲ್ ಒಳಗೂ ಕೊರೊನಾ ಪ್ರವೇಶಿಸಿ ಕೆಲ ಆಟಗಾರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪ್ರಸ್ತುತ ಐಪಿಎಲ್ ಟೂರ್ನಿಯ 29 ಪಂದ್ಯಗಳು ಈಗಾಗಲೇ ಮುಗಿದಿದ್ದು ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರಿಸಲು ಬಿಸಿಸಿಐ ಈ ಚಿಂತನೆಯನ್ನು ನಡೆಸುತ್ತಿದೆ.

 

ಇತ್ತೀಚೆಗಷ್ಟೇ ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ 50,000 ಡಾಲರ್ ದೇಣಿಗೆ ನೀಡಿ ಸುದ್ದಿಯಾಗಿದ್ದ ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್ ಕಮಿನ್ಸ್ ಇದೀಗ ಐಪಿಎಲ್ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಒಂದು ಕ್ರಿಕೆಟ್ ಟೂರ್ನಿ ಮಾತ್ರವಲ್ಲದೆ ಭಾರತದಲ್ಲಿ ಅದೊಂದು ದೊಡ್ಡ ಮನರಂಜನೆಯ ವಿಷಯವಾಗಿದೆ. ಐಪಿಎಲ್ ಪಂದ್ಯಗಳು ನಡೆಯುತ್ತಿದ್ದರೆ ಬಹುತೇಕ ಭಾರತೀಯರು ಬಿಡುವು ಮಾಡಿಕೊಂಡು ಟಿವಿ ಮುಂದೆ ಕುಳಿತು ಪಂದ್ಯಗಳನ್ನು ವೀಕ್ಷಿಸುತ್ತಾರೆ.

 

 

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಟವಾಡಿದ್ದ ಪ್ಯಾಟ್ ಕಮಿನ್ಸ್ ಕೂಡ ಇದೇ ವಿಚಾರದ ಕುರಿತು ಮಾತನಾಡಿದ್ದು ಐಪಿಎಲ್ ಪಂದ್ಯಗಳು ನಡೆಯುವುದರಿಂದ ಅನೇಕ ಭಾರತೀಯರು ಟಿವಿ ಮುಂದೆ ಕುಳಿತು ಪಂದ್ಯಗಳನ್ನು ವೀಕ್ಷಿಸುತ್ತಾರೆ, ಹೀಗಾಗಿ ಅನೇಕ ಜನರು ನಾಲ್ಕರಿಂದ ಐದು ಗಂಟೆಗಳ ಕಾಲ ಹೊರಹೋಗದೇ ಮನೆಯಲ್ಲಿಯೇ ಉಳಿದುಬಿಡುತ್ತಾರೆ. ಇದರಿಂದ ಕೊರೊನಾವೈರಸ್ ಹರಡುವಿಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗುವುದಂತೂ ನಿಜ ಹೀಗಾಗಿ ಐಪಿಎಲ್ ಪಂದ್ಯಗಳನ್ನು ಮುಂದುವರಿಸುವುದು ಉತ್ತಮ ಎಂದು ಪ್ಯಾಟ್ ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿದ್ದಾಗ ಕೊರೊನಾದ ಭಯ ತನ್ನನ್ನು ಕಾಡಲಿಲ್ಲ, ಕಳೆದ ಆವೃತ್ತಿಗಳು ನೀಡಿದ ಅನುಭವವನ್ನೇ ಈ ಆವೃತ್ತಿಯೂ ನೀಡಿತು ಎಂದು ಪ್ಯಾಟ್ ಕಮಿನ್ಸ್ ತಿಳಿಸಿದರು.

 

LEAVE A REPLY

Please enter your comment!
Please enter your name here