ಇಂಗ್ಲೆಂಡ್ ವಿರುದ್ಧದ 5 ಟಿ ಟ್ವೆಂಟಿ ಈ ಸರಣಿಯ ಐದನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆಗೆ ವಿರಾಟ್ ಕೊಹ್ಲಿ ಅವರು ಓಪನಿಂಗ್ ಬ್ಯಾಟಿಂಗ್ ಮಾಡಿದರು. ಅಯ್ಯೋ ವಿರಾಟ್ ಕೊಹ್ಲಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಬರುತ್ತಿದ್ದಾರೆ ಅಷ್ಟೇನೂ ರನ್ ಹೊಡೆಯುವುದಿಲ್ಲ ಎಂದು ತುಂಬಾ ಜನ ಭಾವಿಸಿದ್ದರು. ಆದರೆ ನಡೆದದ್ದೇ ಬೇರೆ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 80 ರನ್ ಗಳನ್ನು ಬಾರಿಸಿ ಟೀಂ ಇಂಡಿಯಾ ಬೃಹತ್ ಮೊತ್ತ ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಹೀಗೆ ತನ್ನ ಬ್ಯಾಟಿಂಗ್ ಮೂಲಕ ಟ್ರೋಲ್ ಮಾಡುವವರಿಗೆ ವಿರಾಟ್ ಕೊಹ್ಲಿ ಅವರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದರು. ಇದೀಗ ವಿರಾಟ್ ಕೊಹ್ಲಿ ಅವರು ತಾವು ಓಪನಿಂಗ್ ಬಂದ ವಿಚಾರದ ಕುರಿತು ಮಾತನಾಡಿದ್ದು ಇಲ್ಲಿ ಮಾತ್ರವಲ್ಲ ಐಪಿಎಲ್ ನಲ್ಲಿಯೂ ಸಹ ನಾನು ಈ ಬಾರಿ ಓಪನಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೀಗಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ವಿರಾಟ್ ಕೊಹ್ಲಿ ಅವರು ಕಣಕ್ಕಿಳಿಯುವುದು ಪಕ್ಕಾ ಎಂದಂತಾಯಿತು. ದೇವದತ್ ಪಡಿಕ್ಕಲ್ ಅವರ ಜತೆ ವಿರಾಟ್ ಕೊಹ್ಲಿ ಅವರ ಕಾಂಬಿನೇಷನ್ ಸಖತ್ ವರ್ಕ್ ಆಗಲಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗಳು ಈಗಾಗಲೇ ಶುರುವಾಗಿವೆ.