ಐಪಿಎಲ್ ನಿಂದ ಉಂಟಾದ ಕಷ್ಟವನ್ನು ಬಿಚ್ಚಿಟ್ಟ ವಾರ್ನರ್ ಪತ್ನಿ

0
58

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ಐಪಿಎಲ್ ಬಯೋಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ತರಬೇತುದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಬ್ಯಾಟ್ಸ್‌ಮನ್‌ ಆಗಿ ಜವಾಬ್ದಾರಿಯುತ ಆಟವನ್ನಾಡಿದರೂ ಸಹ ನಾಯಕನಾಗಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಹೀಗಾಗಿ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ನೀಡಿದ ಕಾರಣ ವಾರ್ನರ್‌ನ್ನು ನಾಯಕ ಸ್ಥಾನದಿಂದ ತೆರವುಗೊಳಿಸಿ ಕೇನ್ ವಿಲಿಯಮ್ಸನ್ ಹೆಗಲಿಗೆ ಹೈದರಾಬಾದ್ ತಂಡದ ನಾಯಕತ್ವವನ್ನು ಹಾಕಲಾಯಿತು.


ಇದಾದ ಕೆಲವೇ ದಿನಗಳ ನಂತರ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು. ಈ ವೇಳೆ ಡೇವಿಡ್ ವಾರ್ನರ್ ಭಾರತದಲ್ಲಿದ್ದಾಗ ತಾನು ಮತ್ತು ತನ್ನ ಮಕ್ಕಳು ಪಟ್ಟ ಕಷ್ಟವನ್ನು ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಹೇಳಿಕೊಂಡಿದ್ದಾರೆ. ‘ಭಾರತದಲ್ಲಿ ಕೊರೊನಾವೈರಸ್ ಹೆಚ್ಚಾಗಿದ್ದ ಸುದ್ದಿಯನ್ನು ಕೇಳಿ ನಾನು ಮತ್ತು ನನ್ನ ಮಕ್ಕಳು ತೀರಾ ಭಯಭೀತರಾಗಿದ್ದೆವು, ಮಕ್ಕಳಂತೂ ಅವರ ತಂದೆಯನ್ನು ನೋಡಲು ಹಾತೊರೆಯುತ್ತಿದ್ದರು. ವಾರ್ನರ್ ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು ಎಂದು ಎದುರು ನೋಡುತ್ತಿದ್ದೆವು’ಎಂದು ಕ್ಯಾಂಡಿಸ್ ವಾರ್ನರ್ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here