ವಿಲಿಯಮ್ಸನ್ ರಹಾನೆ ಜಾಗ ತುಂಬುತ್ತಾರಂತೆ!

0
50

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಕೇನ್ ವಿಲಿಯಮ್ಸನ್ ಒಂದುವೇಳೆ ಭಾರತೀಯ ಆಟಗಾರನಾಗಿದ್ದರೆ ವಿರಾಟ್ ಕೊಹ್ಲಿಗಿಂತ ಅತ್ಯುತ್ತಮ ಆಟಗಾರನಾಗಿರುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ ಭಾರಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಮತ್ತೊಬ್ಬ ಮಾಜಿ ಬ್ರಿಟಿಷ್ ಕ್ರಿಕೆಟಿಗ ಮಾಂಟಿ ಪನೇಸರ್ ಕೂಡ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಜೊತೆ ಭಾರತೀಯ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆಯನ್ನು ಹೋಲಿಕೆ ಮಾಡಿ ಮಾತನಾಡಿದ್ದಾರೆ.


ಟೀಮ್ ಇಂಡಿಯಾದ ಅಜಿಂಕ್ಯ ರಹಾನೆ ಮತ್ತು ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಇಬ್ಬರದ್ದೂ ಸಹ ಒಂದೇ ರೀತಿಯ ವ್ಯಕ್ತಿತ್ವ. ಪಂದ್ಯದ ಯಾವುದೇ ಸಮಯದಲ್ಲಿಯೂ ಸಹ ತಾಳ್ಮೆಯನ್ನು ಕಳೆದುಕೊಳ್ಳದೆ ನಾಯಕತ್ವವನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಈ ಇಬ್ಬರು ಆಟಗಾರರು ತಮ್ಮ ಸರಳತೆಯಿಂದ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.


ಹೀಗೆ ಅನೇಕ ಸ್ವಜಾತೀಯತೆಗಳನ್ನು ಹೊಂದಿರುವ ರಹಾನೆ ಮತ್ತು ಕೇನ್ ವಿಲಿಯಮ್ಸನ್ ಕುರಿತು ಮಾತನಾಡಿದ ಪನೇಸರ್ ‘ಒಂದುವೇಳೆ ಕೇನ್ ವಿಲಿಯಮ್ಸನ್ ಭಾರತೀಯ ಆಟಗಾರನಾಗಿದ್ದರೆ, ಅವರು ಅಜಿಂಕ್ಯ ರಹಾನೆಗೆ ಪರಿಪೂರ್ಣ ಬದಲಿ ಆಟಗಾರನಾಗಿರುತ್ತಿದ್ದರು. ಇಬ್ಬರು ಸಹ ಒಂದೇ ರೀತಿಯ ವ್ಯಕ್ತಿತ್ವ ಹೊಂದಿರುವುದರಿಂದ ಕೇನ್ ವಿಲಿಯಮ್ಸನ್ ಅಜಿಂಕ್ಯ ರಹಾನೆ ಸ್ಥಾನ ತುಂಬುತ್ತಿದ್ದರು’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here